ಹೊಸದಿಲ್ಲಿ: ಜಾಮೀನು ಆದೇಶದ ಪ್ರತಿಯಲ್ಲಿ ಜೈಲಧಿಕಾರಿಗಳಿಗೆ ಸಲ್ಲಿಸುವಲ್ಲಿ ಆಗುತ್ತಿರುವ ವಿಳಂಬವು “ಅತ್ಯಂತ ಗಂಭೀರ ಲೋಪ’ವಾಗಿದೆ. ಈ ಸಮಸ್ಯೆಗೆ ಸಂಬಂಧಿಸಿ ಯುದ್ದೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಆಯೋಜಿಸಿದ್ದ ವರ್ಚುವಲ್ ಕೋರ್ಟ್ ಮತ್ತು ಇ-ಸೇವಾ ಕೇಂದ್ರಗಳ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, “ಆದೇಶಗಳ ಪ್ರತಿಯು ವಿಳಂಬವಾಗಿ ಜೈಲಧಿಕಾರಿಗಳ ಕೈಸೇರುತ್ತಿರುವ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕಾಗಿದೆ. ಇದು ಪ್ರತಿಯೊಬ್ಬ ವಿಚಾರಣಾಧೀನ ಕೈದಿಯ “ಸ್ವಾತಂತ್ರ್ಯ’ಕ್ಕೆ ಸಂಬಂಧಿಸಿದ ವಿಚಾರವಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ:ಬಿಜೆಪಿ ನಾಯಕರ ಟೀಕೆಗಳಿಗೆ ಉಪ ಚುನಾವಣೆ ಫಲಿತಾಂಶ ಉತ್ತರ ಕೊಟ್ಟಿದೆ: ಡಿಕೆಶಿ
ಈ ಹಿಂದೆ ಸಿಜೆಐ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಕೂಡ ಈ ಸಮಸ್ಯೆ ಕುರಿತು ಬೆಳಕು ಚೆಲ್ಲಿತ್ತು. ಆದೇಶಗಳ ಪ್ರತಿಯನ್ನು ರವಾನಿಸಲು ನಾವು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸ್ಪಷ್ಟ ಮಾಧ್ಯಮವೊಂದನ್ನು ಸ್ಥಾಪಿಸಲಿದ್ದೇವೆ ಎಂದು ಹೇಳಿತ್ತು.