ಕೊಪ್ಪಳ: ಶೀಘ್ರವೇ ಕ್ಷೇತ್ರದ ಪ್ರತಿ ಮನೆಗೂ ಜೆಜೆಎಂ ಮೂಲಕ ಶುದ್ಧ ಕುಡಿಯುವ ನೀರು ದೊರೆಯಲಿದ್ದು, ಬೇಕಾದಾಗ ನೀರು ಸಿಗುವ ಸೌಲಭ್ಯವಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭರವಸೆ ನೀಡಿದರು.
ತಾಲೂಕಿನ ಗೊಂಡಬಾಳ ಜಿಪಂ ವ್ಯಾಪ್ತಿಯ ಹಾಲವರ್ತಿ, ಕುಣಿಕೇರಿ, ಕುಣಿಕೇರಿ ತಾಂಡಾ, ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳ, ಹಿರೇಕಾಸನಕಂಡಿ, ಅಲ್ಲಾನಗರ ಗ್ರಾಮಗಳಲ್ಲಿ ವಿವಿಧ ಯೋಜನೆಯಡಿ 8.69 ಕೋಟಿ ರೂ.ನಡಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕುಣಿಕೇರಿ ಸೇರಿದಂತೆ ಅನೇಕ ದೊಡ್ಡ ಗ್ರಾಮಗಳ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಾಗುವುದು. ಅವುಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಿ ಕೆಲಸ ಮಾಡಲು ಶ್ರಮಿಸುತ್ತಿದೆ. ಕುಣಿಕೇರಿಯ ಇನ್ನೊಂದು ಕೆರೆ ಪುನಃಶ್ಚೇತನಕ್ಕೆ ಒತ್ತು ಕೊಟ್ಟು ಕೆರೆ ತುಂಬಿಸುವ ಯೋಜನೆಯಲ್ಲಿ ಸೇರಿಸಲಾಗುವುದು.
ಯಾವುದೇ ಚುನಾವಣೆಗಳು ಇಲ್ಲದ ಹೊತ್ತಲ್ಲೂ ನಾವು ಪ್ರತಿ ಹಳ್ಳಿಯ ಜನರನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲಿನ ಸಮಸ್ಯೆ ಆಲಿಸುತ್ತಿರುವುದು ನಮ್ಮ ಮೇಲೆ ಜನರಆಶೀರ್ವಾದದ ಹೊರೆ ಇದೆ. ಅವರ ಋಣ ತೀರಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದು, ಸರಕಾರ ನೆಪ ಹೇಳದೆ ಅನುದಾನ ನೀಡಬೇಕಿದೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಫಕೀರಶೆಟ್ರ ಮುಂಡರಗಿ, ಉಪಾಧ್ಯಕ್ಷೆ ಈರಮ್ಮ ಮಡಿವಾಳರ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ತಾಪಂ ಮಾಜಿ ಅಧ್ಯಕ್ಷ ಬಾಲಚಂದ್ರನ್, ಮುಖಂಡರಾದ ಹನುಮಂತಪ್ಪ ಜಲವ ನಿ, ನವೋದಯ ವಿರುಪಣ್ಣ, ಪಂಪಣ್ಣ ಪೂಜಾರ, ಹನುಮೇಶ ಹೊಸಳ್ಳಿ, ಸಲೀಂ ಅಳವಂಡಿ, ಗವಿಸಿದ್ದನಗೌಡ್ರ ಪಾಟೀಲ್, ಆನಂದ ಕಿನ್ನಾಳ, ಹನುಮೇಶ ಹೊಸಳ್ಳಿ, ಪಂಪಣ್ಣ ಪೂಜಾರ, ಮುದಿಯಪ್ಪ ಆದೋನಿ, ಹೇಮಣ್ಣ ದೇವರಮನಿ, ಹುಸ್ಮಾನ್ ಸಾಬ್, ಮಂಜುನಾಥ ಜಿ. ಗೊಂಡಬಾಳ, ಹನುಮಂತಪ್ಪ ಬೀಡನಾಳ, ಎಇಇ ವಿಲಾಸ ಬೋಸ್ಲೆ, ವೆಂಕನಗೌಡ್ರ ಮಾ.ಪಾ., ಶರಣಪ್ಪ ಚೌಡಕಿ ಸೇರಿ ಇತರರು ಇದ್ದರು.