Advertisement

ಅರೆ ವೈದ್ಯಕೀಯ ಸಿಬಂದಿಗೆ ಶೀಘ್ರ ವೇತನ

02:07 AM Apr 29, 2020 | Sriram |

ಬೆಂಗಳೂರು: ಒಂದೆರಡು ದಿನಗಳಲ್ಲಿ ಅರೆ ವೈದ್ಯಕೀಯ ನೌಕರರ ವೇತನ ನೀಡಲಾಗುವುದು ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಭರವಸೆ ನೀಡಿದೆ.

Advertisement

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ನೇತೃತ್ವದ ನ್ಯಾಯಪೀಠಕ್ಕೆ ಸರಕಾರದ ಪರ ವಕೀಲರು ಸಲ್ಲಿಸಿರುವ ಲಿಖೀತ ಹೇಳಿಕೆಯಲ್ಲಿ ಈ ಮಾಹಿತಿ ನೀಡಲಾಗಿದೆ.

ಆಶಾ ಕಾರ್ಯಕರ್ತೆಯರು ಮತ್ತು ಅರೆ ವೈದ್ಯಕೀಯ ನೌಕರರ ವೇತನದ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರ ಕ್ರಮ ಕೈಗೊಂಡಿದೆ. ಆಶಾ ಕಾರ್ಯಕರ್ತೆಯರ ಮಾರ್ಚ್‌ 2020ರ ವರೆಗಿನ ವೇತನವನ್ನು ಬಿಡುಗಡೆ ಮಾಡಲಾಗಿದೆ. ಅರೆ ವೈದ್ಯಕೀಯ ನೌಕರರ ಕೇಲವು ತಿಂಗಳ ವೇತನ ಬಾಕಿ ಉಳಿದಿರುವುದು ನಿಜ. ಇವರ ವೇತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ಜಿ.ಪಂ.ಗಳಿಗೆ ಹಣ ಬಿಡುಗಡೆ ಮಾಡಲಾಗಿದ್ದು ಒಂದೆರಡು ದಿನಗಳಲ್ಲಿ ಅವರಿಗೆ ವೇತನ ಸಿಗಲಿದೆ ಎಂದು ಸರಕಾರ ಹೇಳಿದೆ. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿತು.

 

Advertisement

Udayavani is now on Telegram. Click here to join our channel and stay updated with the latest news.

Next