Advertisement
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನವೋದ್ಯಮ, ಉದ್ಯಮಗಳ ಜತೆ ಸಂವಾದ ಮತ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ನಾವಿನ್ಯತೆ ಜನರ ಸಬಲೀಕರಣಕ್ಕೆ ದಾರಿ ಮಾಡಿಕೊಡಲಿದೆ. ಕೌಶಲ್ಯ ವರ್ಧನೆ, ನವೋದ್ಯಮಗಳ ಪೋಷಣೆ, ಜಾಗತಿಕ ಒಕ್ಕೂಟಗಳ ಏರ್ಪಡಿಸಿಕೊಳ್ಳುವಿಕೆ ಹಾಗೂ ನಾವಿನ್ಯತೆ ಬೆಂಬಲಿಸಲು ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
Related Articles
Advertisement
ಐಟಿ, ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಯುವ ಉದ್ಯಮಿಗಳಿಗೆ ಸರ್ಕಾರ ಅಗತ್ಯ ವೇದಿಕೆ ಕಲ್ಪಿಸುತ್ತಿದೆ. ವಿಷನ್ ಗ್ರೂಪ್ ವರದಿ ಆಧರಿಸಿ ನವೋದ್ಯಮದ ಉತ್ತೇಜನಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದೇವೆ. ವಿವಿ ಮತ್ತು ಕಾಲೇಜು ಹಂತದಲ್ಲಿ ಗುಣಮಟ್ಟದ ಕೋರ್ಸ್ ಒದಗಿಸಲು ಕ್ರಮ ತೆಗೆದುಕೊಳ್ಳಲಿದ್ದೇವೆ. ಈ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕೆಲಸ ಮಾಡಬೇಕು ಎಂದರು.
ಉತ್ತಮ ಆಡಳಿತ ಮತ್ತು ಆಡಳಿತ ಸುಧಾರಣೆಗೆ ಉತ್ತಮ ತಂತ್ರಜ್ಞಾನ ಅತಿ ಅವಶ್ಯಕ. ಕರ್ನಾಟಕ ಇನ್ನೋವೇಷನ್ ಪ್ರಾಧಿಕಾರ ಜಾರಿಗೆ ತರುವ ಮೂಲಕ ಐಟಿ, ಬಿಟಿಗೆ ಹೊಸ ಆಯಾಮ ನೀಡಿದ್ದೇವೆ. ಪ್ರಾಜೆಕ್ಟ್ ಅಭಿವೃದ್ಧಿಯಲ್ಲಿ ಕರ್ನಾಟಕ ಮುಂಚುಣಿಯಲ್ಲಿದೆ ಎಂದು ಹೇಳಿದರು. ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಮಾತನಾಡಿ, ಕೈಗಾರಿಕೆ ಹಾಗೂ ಕಾಲೇಜುಗಳ ನಡುವೆ ಸಮನ್ವಯ ಅತಿ ಅಗತ್ಯ.
ಕಾಲೇಜುಗಳಲ್ಲಿ ಬೋಧನಾ ಕ್ರಮ ಬದಲಾಗಬೇಕು ಮತ್ತು ಪಠ್ಯಕ್ರಮದಲ್ಲೂ ಬದಲಾವಣೆ ತರಬೇಕಿದೆ. ಕೈಗಾರಿಕೆಗಳಿಗೆ ಹೊಂದಿಕೊಳ್ಳಲುವ ಪಠ್ಯಕ್ರಮಗಳು ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಟಾರ್ಟ್‌ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಇಲಾಖೆ ನಿರ್ದೇಶದ ಪ್ರಶಾಂತ್ ಕುಮಾರ್ ವಿಶ್ರಾ, ಪ್ರಾನ್ಸ್ ಕಾನ್ಸುಲೇಟ್ ಜನರಲ್ ಮಾಜೋರಿ ವಾನ್ ಬೆಲಿಜೆಮ್ ಮತ್ತಿತರರಿದ್ದರು.
ಉನ್ನತ ತಂತ್ರಜ್ಞಾನದಿಂದ ಉತ್ಕೃಷ್ಟತಾ ಕೇಂದ್ರ: ನಾವಿನ್ಯತೆಯುಳ್ಳ ವಾಣಿಜ್ಯೋದ್ಯಮಿಗಳಿಗೆ ಎಲಿವೇಟ್ ಮುಂತಾದ ಅನುದಾನ ಬೆಂಬಲ ಕಾರ್ಯಕ್ರಮಗಳ ಮೂಲಕ ಸರ್ಕಾರ ಅವುಗಳನ್ನು ಪ್ರೋತ್ಸಾಹಿಸುತ್ತಿದೆ. ಕೈಗಾರಿಕೆ, ಶಿಕ್ಷಣ, ಉದ್ಯಮ ಹಾಗೂ ನವೋದ್ಯಮಗಳಿಗೆ ಸಹಭಾಗಿತ್ವಕ್ಕಾಗಿ ವೇದಿಕೆ ಕಲ್ಪಿಸಲು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಉನ್ನತ ತಂತ್ರಜ್ಞಾನಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್ .ಯಡಿ ಯೂರಪ್ಪ ಹೇಳಿದರು.
ಶೀಘ್ರ ಐಟಿ ನೀತಿ ಜಾರಿಗೆ ತರಲಿದ್ದೇವೆ. ಡೀಪ್ ತಂತ್ರಜ್ಞಾನ ಅಳವಡಿಕೆಗೆ ಸರ್ಕಾರ ನಿರ್ಧಾರ ಮಾಡಿದೆ. ಇದು ಯುವಕ-ಯುವತಿಯರಿಗೆ ಅನುಕೂಲವಾಗಲಿದ್ದು ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಅಳವಡಿಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.-ಡಾ.ಸಿ.ಎನ್.ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ