Advertisement

ಶೀಘ್ರ ಮುಖ್ಯರಸ್ತೆ ಅಗಲೀಕರಣ

01:05 PM Sep 13, 2018 | Team Udayavani |

ದೊಡ್ಡಬಳ್ಳಾಪುರ: ಬೆಳೆಯುತ್ತಿರುವ ನಗರಕ್ಕೆ ಪೂರಕವಾಗಿ ನಗರದ ಹೊರವಲಯದ ರಸ್ತೆಗಳು ಅಗಲೀಕರಣವಾಗುತ್ತಿದ್ದು, ನಗರದ ಮುಖ್ಯ ರಸ್ತೆಗಳ ಅಗಲೀಕರಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದ್ದಾರೆ.

Advertisement

ನಗರದ ಜಯಚಾಮರಾಜೇಂದ್ರ ವೃತ್ತದ ಬಳಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ ರಂಗಪ್ಪ
ವೃತ್ತದಿಂದ ಗಾಂಧಿ ಚೌಕದವರೆಗೆ 1.5 ಕೋಟಿ ರೂ. ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಅನುದಾನ ಒದಗಿಸುವ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಇದಕ್ಕೆ ನಗರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕಿದ್ದು, ನಾಗರಿಕರ ಸಹಕಾರ ಸಹ ಅಗತ್ಯವಾಗಿದೆ ಎಂದು ತಿಳಿಸಿದರು.
 
 ನಗರದ ಖಾಸ್‌ಬಾಗ್‌ ರೇಲ್ವೆ ಅಂಡರ್‌ ಬ್ರಿಡ್ಜ್ 12 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ವಾಹನಗಳ ಸುಗಮ
ಸಂಚಾರಕ್ಕೆ ಅನುಕೂಲವಾಗಲಿದೆ. ಇದರೊಂದಿಗೆ ನಗರದ ಡಿ.ಕ್ರಾಸ್‌ ವೃತ್ತದ ಬಳಿ ಸ್ಕೈವಾಕ್‌ ನಿರ್ಮಾಣ ಸೇರಿ ಬೆಂಗಳೂರು ಹಿಂದೂಪುರ ಹೆದ್ದಾರಿಯಲ್ಲಿ ಅಗತ್ಯ ಸರ್ವಿಸ್‌ ರಸ್ತೆ, ಬೆಲ್‌ ಮೌತ್‌ ರಸ್ತೆ ಮೊದಲಾದ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಭುದೇವ್‌, ರಸ್ತೆ ಅಗಲೀಕರಣಕ್ಕೆ ಮರ ಕಡಿಯುವುದು ಅನಿವಾರ್ಯ. ಶಾಸಕರು ಕೈಗೊಂಡಿರುವ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತಮ್ಮ ಸಹಕಾರವಿದೆ. ರಸ್ತೆ ಅಗಲೀಕರಣಕ್ಕೆ ನಾಗರಿಕರು ಸಹಕರಿಸಬೇಕೆಂದರು.  ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿ, ಪೌರಾಯುಕ್ತ ಆರ್‌.ಮಂಜುನಾಥ್‌, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಮಂಜುನಾಥ್‌, ಸುಹಾಸ್‌, ನಗರ ಸಭಾ ಸದಸ್ಯರಾದ ಶಿವಕುಮಾರ್‌, ಭಾಗ್ಯ ಚೌಡರಾಜ್‌, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಜಿ.ಅಶೋಕ್‌, ಕಾರ್ಯದರ್ಶಿ ಯೋಗ ನಟರಾಜ್‌, ಮುಖಂಡರಾದ ಸೋಮರುದ್ರಶರ್ಮ ಮತ್ತಿತರರಿದ್ದರು.

 ಕೊಳವೆಬಾವಿ ಕಾಮಗಾರಿಗೆ ಚಾಲನೆ: ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಗರದ ವಿವಿಧ ಕೊಳಗೇರಿಗಳಿಗೆ ಸುಮಾರು 60 ಲಕ್ಷ ರೂ., ವೆಚ್ಚದ ಕಾಂಕ್ರಿಟ್‌ ರಸ್ತೆ ಕಾಮಗಾರಿ ಹಾಗೂ ಕೊಳವೆಬಾವಿಗಳಿಗೆ ನಗರದ ವೀರಭದ್ರನ ಪಾಳ್ಯದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್‌, ನಗರಸಭೆ ಸದಸ್ಯೆ ಭಾಗ್ಯ ಚೌಡರಾಜ್‌, ನಾಮಿನಿ ಸದಸ್ಯ ಅಂಜನಮೂರ್ತಿ ಇದ್ದರು.

Advertisement

ಡಿ.ಕ್ರಾಸ್‌ ವೃತ್ತದಿಂದ ಗಾಂಧಿ ವೃತ್ತದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಬಹುತೇಕ ಮುಗಿದಿದ್ದು,
ಇಲ್ಲಿ ಸ್ವಲ್ಪ ದೂರ ಅಡಚಣೆಯಾಗಿದ್ದು, ಇದನ್ನು ಇತ್ಯರ್ಥ ಪಡಿಸಿ, ಕಾಮಗಾರಿ ಮುಂದುವರಿಸಲಾಗುವುದು.
 ಟಿ.ವೆಂಕಟರಮಣಯ್ಯ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next