Advertisement
ಎಣ್ಣೆ ಹೋಳಿಗೆಬೇಕಾಗುವ ಸಾಮಗ್ರಿ: ಸಣ್ಣ ರವೆ- 2 ಕಪ್, ಗೋಧಿ ಹಿಟ್ಟು- 2 ಕಪ್, ತುಪ್ಪ- 2 ಚಮ ಚ, ಬೆಲ್ಲ- 2 ಕಪ್, ಕರಿಯಲು ಎಣ್ಣೆ, ಏಲಕ್ಕಿ, ಸೋಂಪು ಕಾಳು- 1ಚಮಚ.
ಬೇಕಾಗುವ ಸಾಮಗ್ರಿ: ರವೆ- ಕಾಲು ಕೆ.ಜಿ, ಸಕ್ಕರೆ- ಕಾಲು ಕೆ.ಜಿ, ತುರಿದ ಕೊಬ್ಬರಿ- 1 ಬಟ್ಟಲು, ಮೈದಾ ಹಿಟ್ಟು- ಮುಕ್ಕಾಲು ಕೆ.ಜಿ, ಸೋಂಪು ಕಾಳು- ಒಂದು ಚಮಚ, ಏಲಕ್ಕಿ, ಕರಿಯಲು ಎಣ್ಣೆ, ಅಡುಗೆ ಸೋಡ-ಕಾಲು ಚಮಚ, ತುಪ್ಪ -2 ಚಮಚ, ಜಾಯಿ ಕಾಯಿ- ಅರ್ಧ.
Related Articles
Advertisement
ಬಿಳಿ ಎಳ್ಳುಂಡೆಬೇಕಾಗುವ ಸಾಮಗ್ರಿ: ಎಳ್ಳು- 2 ಬಟ್ಟಲು, ಬೆಲ್ಲ- 2 ಬಟ್ಟಲು, ತುಪ್ಪ -3 ಚಮಚ, ಏಲಕ್ಕಿ ಪುಡಿ- 1 ಚಮಚ. ಮಾಡುವ ವಿಧಾನ: ಎಳ್ಳನ್ನು ಚೆನ್ನಾಗಿ ಹುರಿದು, ಬೆಲ್ಲ, ಎಳ್ಳು, ಏಲಕ್ಕಿ ಪುಡಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಆ ಮಿಶ್ರಣವನ್ನು ತುಪ್ಪದೊಂದಿಗೆ ಬೆರೆಸಿ ಉಂಡೆ ಕಟ್ಟಿದರೆ ಎಳ್ಳುಂಡೆ ರೆಡಿ. ಹತ್ತಿಪ್ಪತ್ತು ನಿಮಿಷದಲ್ಲಿ ರುಚಿ ರುಚಿಯಾದ, ಫ್ರೆಶ್ ಆದ ಹಾಗೂ ಚಳಿಗಾಲದಲ್ಲಿ ದೇಹ ಕ್ಕೆ ಒಳಿತಾಗುವ ತಿನಿಸು ಮಾಡಬೇಕೆಂದರೆ, ಇದು ಒಳ್ಳೆಯ ಆಯ್ಕೆ. ಶೇಂಗಾ ಉಂಡೆ
ಬೇಕಾಗುವ ಸಾಮಗ್ರಿ: ಶೇಂಗಾ ಬೀಜ- 2 ಕಪ್, ಬೆಲ್ಲ- 2 ಕಪ್, ಏಲಕ್ಕಿ ಪುಡಿ, ತುಪ್ಪ- 3 ಚಮಚ, ಬಿಳಿ ಎಳ್ಳು- 1 ಕಪ್. ಮಾಡುವ ವಿಧಾನ: ಶೇಂಗಾ ಹಾಗೂ ಎಳ್ಳನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ನಂತರ, ಎರ ಡನ್ನೂ ಏಲಕ್ಕಿ ಜೊತೆ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಬಾಣಲೆಗೆ ಬೆಲ್ಲ ಹಾಗೂ ನೀರು ಹಾಕಿ, ಒಂದೆಳೆ ಪಾಕ ಬರುವವರೆಗೂ ಕಾಯಿಸಿ, ನಂತರ ತುಪ್ಪ ಹಾಕಿ. ರುಬ್ಬಿದ ಮಿಶ್ರಣದ ಜೊತೆ, ಶೋಧಿ ಸಿದ ಪಾಕ ಹಾಕಿ ಮಿಶ್ರಣ ಮಾಡಿ, ಉಂಡೆ ಕಟ್ಟಿ. ಮಿಕ್ಸ್ ಸ್ವೀಟ್ ಉಂಡೆ
ಬೇಕಾಗುವ ಸಾಮಗ್ರಿ: 2 ಬಟ್ಟಲು ಸಣ್ಣ ರವೆ, 2 ಬಟ್ಟಲು ಕಡಲೆ ಹಿಟ್ಟು, 2 ಬಟ್ಟಲು ಗೋಧಿ ಹಿಟ್ಟು, 4 ಚಮಚ ತುಪ್ಪ, ಹಾಲು (ಎಲ್ಲಾ ಹಿಟ್ಟು ಮಿಶ್ರಣ ಮಾಡಿದಾಗ ಒಟ್ಟಾಗುವ ಪ್ರಮಾಣಕ್ಕೆ ಸರಿಯಾದ ಅಳತೆಯಲ್ಲಿ), 2 ಬಟ್ಟಲು ಸಕ್ಕರೆ, ಏಲಕ್ಕಿ ಪುಡಿ. ಮಾಡುವ ವಿಧಾನ: ಕಾಯಿ ಸಿದ ತುಪ್ಪ ದಲ್ಲಿ ರವೆ ಯನ್ನು ಹುರಿದುಕೊಳ್ಳಿ. ಅದಕ್ಕೆ ಗೋಧಿ ಹಿಟ್ಟು, ಕಡಲೆ ಹಿಟ್ಟನ್ನು ಹಾಕಿ ಹುರಿದು, ತೆಗೆದಿಡಿ. ಬಾಣಲೆಗೆ ಹಾಲು, ಸಕ್ಕರೆ ಹಾಕಿ ಗಟ್ಟಿಯಾಗುವವರೆಗೂ ಕುದಿಸಿ. ಗಟ್ಟಿಯಾದ ಪಾಕಕ್ಕೆ ತುಪ್ಪ ಹಾಕಿ, ಮಿಶ್ರಣ ಮಾಡಿದ ಹಿಟ್ಟನ್ನು ಹಾಕಿ ಗಂಟಾಗದಂತೆ ಚೆನ್ನಾಗಿ ಕೈಯಾಡಿಸಿ. ಹೂರಣ ತಳ ಬಿಡುವ ಸಮಯದಲ್ಲಿ ತಟ್ಟೆಗೆ ಹಾಕಿ, ತಣ್ಣಗಾದ ನಂತರ ಕೈಗೆ ತುಪ್ಪ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿದರೆ ಸ್ವೀಟ್ ರೆಡಿ. * ಭಾಗ್ಯ ಆರ್. ಗುರುಕುಮಾರ