ನವ ನಿರ್ಮಾಣ ಪರಿವರ್ತನಾ ಯಾತ್ರೆ ಕೈಗೊಂಡಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ 17 ಪ್ರಶ್ನೆಗಳಿಗೆ
ಖಂಡಿತ ಉತ್ತರ ಹೇಳಿ ಹೋಗಬೇಕು ಎನ್ನುವ ಬೇಡಿಕೆಯೊಂದಿಗೆ ಡಿ. 2ರಂದು ಆಳಂದ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಿಸಾನ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ಲೋಹಾರ್ ಹೇಳಿದರು.
Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖೇತಿ ಬಚಾವ್, ಕಿಸಾನ್ ಬಚಾವ್, ಬಿಜೆಪಿ ಹಟಾವ್, ದೇಶ್ ಬಚಾವ್ ಎನ್ನುವ ಘೋಷಣೆಯಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಕಿಸಾನ್ ಘಟಕ, ಅಖೀಲ ಭಾರತ ಕಿಸಾನ್ ಸಭಾ, ಕರ್ನಾಟಕ ಪ್ರಾಂತ ರೈತ ಸಂಘ, ನೇಗಿಲಯೋಗಿ ರೈತ ಒಕ್ಕೂಟ, ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಪಾಲ್ಗೊಳ್ಳುವರು ಎಂದರು.
ಆದರೀಗ ಆ ವರದಿ ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಸುಪ್ರಿಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಈ ಹಿಂದೆ
ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ರೈತರ ಸಾಲ ಮನ್ನಾ ಮಾಡಿತ್ತು. ಆದಾಗ್ಯೂ, ಕೇಂದ್ರ
ಸರ್ಕಾರವು ರೈತರ ಸಾಲ ಮನ್ನಾ ಮಾಡಿಲ್ಲ. ರೈತರ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ಕಡಿತಗೊಳಿಸಲಾಗಿದೆ.
ಅಡಿಕೆ ಬೆಳೆಗಾರರ ಸಮಸ್ಯೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಕಸ್ತೂರಿರಂಗನ್ ವರದಿಯನ್ನು ಜಾರಿಗೆ ತಂದಿಲ್ಲ. ಕಪ್ಪು ಹಣ ವಾಪಸ್ಸು ತರುವುದು ಹುಸಿಯಾಗಿದೆ. ನೋಟು ಅಮಾನ್ಯಿಕರಣ ಮಾಡಿದ್ದು ಸರಿಯೇ ಮುಂತಾದ ಎಲ್ಲ ಪ್ರಶ್ನೆಗಳನ್ನು ಯಡಿಯೂರಪ್ಪ ಅವರನ್ನು ಕೇಳಿ ಪ್ರತಿಭಟನೆ ರೂಪಿಸಲಾಗಿದೆ. ಯಡಿಯೂರಪ್ಪ ಯಾತ್ರೆ ವೇಳೆ ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಮೌಲಾ ಮುಲ್ಲಾ, ಶರಣಬಸಪ್ಪ ಮಮಶೆಟ್ಟಿ, ಕಲ್ಯಾಣಿ ತುಕಾಣಿ, ಭೀಮಾಶಂಕರ ಮಾಡ್ಯಾಳ್, ಸೋಮಶೇಖರ ಮುದ್ದಡಗಾ, ಪ್ರಕಾಶ ಜಾನೆ, ರಾಜಕುಮಾರ ಶಿವಮೂರ್ತಿ, ಬಾಲಚಂದ್ರ ಶಿವಮೂರ್ತಿ ಮುಂತಾದವರು ಹಾಜರಿದ್ದರು.