Advertisement
ಆದರೆ ಅವರು ಸ್ಕಾಟ್ಲೆಂಡ್‌ನಲ್ಲಿ ಅಸುನೀಗಿರುವ ಹಿನ್ನೆಲೆ ರಾಣಿಯ ಅಂತ್ಯಕ್ರಿಯೆಯ ಪ್ರಕ್ರಿಯೆಗೆ “ಆಪರೇಶನ್ ಯುನಿ ಕಾರ್ನ್’ ಹೆಸರು ನೀಡಲು ಸರಕಾರ ನಿರ್ಧರಿಸಿದೆ. ಸೆ.8ರಂದು ರಾಣಿ ನಿಧನ ಹೊಂದಿರುವ ದಿನವನ್ನು ಅತ್ಯಂತ ಪ್ರಮುಖ ದಿನ (ಡಿ ಡೇ) ಎಂದು ಪರಿಗಣಿಸಲಾಗಿದೆ. ಅಂತ್ಯಕ್ರಿಯೆ ಮುಕ್ತಾಯ ವಾಗುವ ವರೆಗೆ ಪ್ರತೀ ದಿನವನ್ನೂ ಡಿ 1, 2, ಈ ರೀತಿಯಲ್ಲಿ ಮುಕ್ತಾಯದ ವರೆಗೆ ಪರಿಗಣಿಸಲು ತೀರ್ಮಾನಿಸಲಾಗಿದೆ.
Related Articles
1965ರಲ್ಲಿ ವಿನ್‌ಸ್ಟನ್ ಚರ್ಚಿಲ್ ಅವರಿಗೆ ಸರಕಾರಿ ಗೌರವದ ಅಂತ್ಯಸಂಸ್ಕಾರ ನಡೆದು ಐವತ್ತು ವರ್ಷಗಳು ಕಳೆದ ಬಳಿಕ 2ನೇ ಎಲಿಜಬೆತ್ ಅವರ ಅಂತ್ಯಸಂಸ್ಕಾರವನ್ನು ಸರಕಾರಿ ಗೌರವದೊಂದಿಗೆ ನಡೆಸಲಾಗುತ್ತಿದೆ. ಅದಕ್ಕೆ ಅನುಗುಣವಾಗಿ ಅರಮನೆಯಿಂದ ಬ್ರಿಟನ್ ಸಂಸತ್‌ನ ವೆಸ್ಟ್‌ಮಿನಿಸ್ಟರ್ ಹಾಲ್‌ಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತದೆ ಮತ್ತು ನಾಲ್ಕು ದಿನಗಳ ಕಾಲ ಗೌರವ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ರಾಣಿಯ ತಂದೆ ಆರನೇ ಜಾರ್ಜ್ ಅವರು 1952ರಲ್ಲಿ ನಿಧನರಾಗಿದ್ದ ಸಂದರ್ಭದಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿತ್ತು. ಅವರು ಇಂಥ ಗೌರವಕ್ಕೆ ಪಾತ್ರರಾದ ರಾಜಮನೆತನದ ಕೊನೆಯ ವ್ಯಕ್ತಿಯಾಗಿದ್ದರು.
Advertisement
ರಾಣಿ ಭೇಟಿ ಕ್ಷಮೆಗಿಂತ ದೊಡ್ಡದುರಾಣಿ ಎರಡನೇ ಎಲಿಜಬೆತ್ 1997ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ಜಲಿಯನ್‌ವಾಲಾಬಾಗ್‌ಗೆ ಭೇಟಿ ನೀಡಿದ್ದರು ಮತ್ತು 1919ರಲ್ಲಿ ನಡೆದಿದ್ದ ಗುಂಡು ಹಾರಾಟದಲ್ಲಿ ಅಸುನೀಗಿದ್ದವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿದ್ದರು. ಈ ಅಂಶ ರಾಣಿ ಕ್ಷಮೆ ಕೋರಿದ್ದಕ್ಕಿಂತ ಹೆಚ್ಚಿನ ಮಹತ್ವ ಪಡೆದಿದೆ ಎಂದು ಜಲಿಯನ್‌ವಾಲಾಬಾಗ್ ಸ್ಮಾರಕ ಟ್ರಸ್ಟ್‌ನ ಕಾರ್ಯದರ್ಶಿ ಸುಕುಮಾರ್ ಮುಖರ್ಜಿ ಹೇಳಿದ್ದಾರೆ. ಬ್ರಿಟನ್‌ನ ರಾಣಿ ಜಲಿಯನ್‌ವಾಲಾ ಬಾಗ್‌ಗೆ ಬಂದದ್ದು ಸಣ್ಣ ಸಂಗತಿ ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. 1997ರಲ್ಲಿ ರಾಣಿ ಭೇಟಿ ನೀಡಿದ ಬಳಿಕ ಘಟನೆಯ ಬಗ್ಗೆ ಕ್ಷಮೆ ಕೋರಬಹುದು ಎಂಬ ನಿರೀಕ್ಷೆ ಆ ಸಂದರ್ಭದಲ್ಲಿ ಉಂಟಾಗಿತ್ತು. ಆದರೆ ಪ್ರಿನ್ಸ್ ಚಾರ್ಲ್ಸ್ ಅವರು 1919ರ ಘಟನೆ ಬಗ್ಗೆ ನೀಡಿದ್ದರು ಎನ್ನಲಾಗಿದ್ದ ಹೇಳಿಕೆ ಭಾರತೀಯರಿಗೆ ಬೇಸರ ತಂದಿತ್ತು. ಮುಂಬಯಿ ಡಬ್ಟಾವಾಲ ಕಂಬನಿ
ಮಹಾರಾಷ್ಟ್ರದ ರಾಜಧಾನಿ ಮುಂಬಯಿಯ ಪ್ರಸಿದ್ಧ ಡಬ್ಟಾವಾಲಗಳು ರಾಣಿ ಎಲಿಜಬೆತ್ ಸಾವಿಗೆ ಕಂಬನಿ ಸುರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನೂತನ್ ಮುಂಬಯಿ ಟಿಫಿನ್ ಬಾಕ್ಸ್ ವಿತರಕರ ಸಂಘದ ಪದಾಧಿಕಾರಿ ರಘುನಾಥ್ ಮೇದೆY, “ಡಬ್ಟಾವಾಲಗಳು ಯಾರಿಗೂ ಗೊತ್ತಿಲ್ಲದ್ದಂತೆ ಕೆಲಸ ಮಾಡುತ್ತಿದ್ದೆವು. ಆದರೆ ರಾಣಿ ಎಲಿಜಬೆತ್ ಅವರಿಂದ ಹಾಗೂ ಅವರ ಕುಟುಂಬದಿಂದಾಗಿ ಇಂದು ನಾವು ಎಲ್ಲರಿಗೂ ಪರಿಚಿತರಾಗಿದ್ದೇವೆ. 2005ರಲ್ಲಿ ರಾಜಕುಮಾರ ಚಾರ್ಲ್ಸ್ ಮತ್ತು ಕಮಿಲ್ಲಾ ಪಾರ್ಕರ್ ಅವರ ವಿವಾಹಕ್ಕೆ ನಾವು ಲಂಡನ್‌ಗೆ ತೆರಳಿದ್ದೆವು. ಅಲ್ಲಿ ರಾಣಿ ಅವರೊಂದಿಗೆ ಕುಳಿತು ಉಪಾಹಾರ ಸೇವಿಸಿದ್ದೆವು. ಅವರು ನಮಗೆ ಪ್ರೀತಿಯಿಂದ ಆತಿಥ್ಯ ನೀಡಿದ್ದರು. 2008ರ ನವೆಂಬರ್‌ನಲ್ಲಿ ನಮ್ಮ ನಗರದ ಮೇಲೆ ಉಗ್ರರು ದಾಳಿ ಮಾಡಿದ್ದರ ಬಗ್ಗೆ ನಮ್ಮೊಂದಿಗೆ ಚರ್ಚಿಸಿದ್ದರು’ ಎಂದು ಅವರು ಹೇಳಿದ್ದಾರೆ. ಏನೇನು ಕಾರ್ಯಕ್ರಮ?
ಸೆ.10
ಆ್ಯಕ್ಸೆಷನ್ ಕೌನ್ಸಿಲ್ ಸಭೆ ಸೇರಿ ಅಧಿಕೃತವಾಗಿ ಚಾರ್ಲ್ಸ್ ರನ್ನು ರಾಜ ಎಂದು ಘೋಷಿಸಲಿದೆ.
ಪ್ರಧಾನಿ ಮತ್ತು ಸಂಪುಟದೊಂದಿಗೆ ಚಾರ್ಲ್ಸ್ ಅವರ ಸಭೆ
ರಾಜನಿಗೆ ನಿಷ್ಠರಾಗಿರುತ್ತೇವೆ ಎಂದು ಸಂಸತ್‌ನಲ್ಲಿ ಹಿರಿಯ ಸಂಸದರ ಪ್ರಮಾಣವಚನ ಸೆ.11
ಎಡಿನ್‌ಬರ್ಗ್‌ನ ಹಾಲಿರುಡ್‌ಹೌಸ್ ಅರಮನೆಗೆ ರಾಣಿಯ ಪಾರ್ಥಿವ ಶರೀರ ರವಾನೆ ಸೆ.12
ರಾಯಲ್‌ಮೈಲ್‌ನಿಂದ ಸೈಂಟ್ ಗೈಲ್ಸ್ ಕ್ಯಾಥಡ್ರಲ್‌ವರೆಗೆ ಮೆರವಣಿಗೆ
ರಾಜಮನೆತನದ ಸದಸ್ಯರಿಂದ ರಾಣಿಗಾಗಿ ಪ್ರಾರ್ಥನೆ
ರಾಣಿಯ ಪಾರ್ಥಿವ ಶರೀರದ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ಸಾಧ್ಯತೆ ಸೆ.13
ಲಂಡನ್‌ನ ಬಕಿಂಗ್‌ಹ್ಯಾಂ ಅರಮನೆಗೆ ಪಾರ್ಥಿವ ಶರೀರ ರವಾನೆ ಸೆ.14
4 ದಿನಗಳ ಕಾಲ ವೆಸ್ಟ್‌ಮಿನ್‌ಸ್ಟರ್ ಹಾಲ್‌ನಲ್ಲೇ ರಾಣಿಯ ಪಾರ್ಥಿವ ಶರೀರ ಇರಲಿದೆ
ಕ್ಯಾಂಟರ್‌ಬರಿ ಆರ್ಚ್‌ಬಿಷಪ್‌ರಿಂದ ಧಾರ್ಮಿಕ ವಿಧಿವಿಧಾನ ಸೆ.15
ಪಾರ್ಥಿವ ಶರೀರ ಅಲ್ಲೇ ಇರಲಿದೆ. ಅಂತ್ಯಸಂಸ್ಕಾರದ ಮೆರವಣಿಗೆಯ ರಿಹರ್ಸಲ್ ನಡೆಯಲಿದೆ. ಸೆ.16
ವಿಶ್ವನಾಯಕರ ಆಗಮನ. ರಾಣಿಯ ಅಂತಿಮ ದರ್ಶನಕ್ಕೆ ಅವಕಾಶ ಸೆ.19
ಟಿವಿ ಮೂಲಕ ಅಂತಿಮ ವಿಧಿವಿಧಾನಗಳ ನೇರಪ್ರಸಾರ. ದೇಶಾದ್ಯಂತ 2 ನಿಮಿಷ ಮೌನಾಚರಣೆ
ಸೈಂಟ್ ಜಾರ್ಜ್ ಚಾಪೆಲ್‌ಗೆ ರಾಣಿಯ ಪಾರ್ಥಿವ ಶರೀರ ಮೆರವಣಿಗೆ
ಸಂಜೆಯ ಬಳಿಕ ರಾಜಮನೆತನದ ಹಿರಿಯರಿಂದ ಅಂತಿಮ ಪ್ರಾರ್ಥನೆ
ಕಿಂಗ್ ಜಾರ್ಜ್ 6 ಮೆಮೋರಿಯಲ್ ಚಾಪೆಲ್‌ನಲ್ಲಿ ಅಂತ್ಯಸಂಸ್ಕಾರ ಪಾಸ್‌ಪೋರ್ಟ್, ಲೈಸನ್ಸ್ ಬೇಡ…
– ರಾಜ ಚಾರ್ಲ್ಸ್ ಅವರಿಗೆ ಯಾವುದೇ ವಾಹನ ಚಾಲನೆಗೆ ಪರವಾನಿಗೆ ಬೇಕಿಲ್ಲ. ಹಾಗೆಯೇ ಯಾವುದೇ ರಾಷ್ಟ್ರಕ್ಕೆ ತೆರಳಬೇಕೆಂದಾದರೆ ಪರವಾನಿಗೆಯೂ ಬೇಕಿಲ್ಲ. ಬ್ರಿಟನ್‌ನಲ್ಲಿ ಈ ಸೌಲಭ್ಯವಿರುವ ಏಕೈಕ ವ್ಯಕ್ತಿ ಅವರಾಗಲಿದ್ದಾರೆ.
– ರಾಣಿ 2ನೇ ಎಲಿಜಬೆತ್ ಅವರ ನಿಜವಾದ ಜನ್ಮದಿನ ಎ. 21. ಆ ದಿನ ಅವರು ವೈಯಕ್ತಿಕವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಅದರ ಜತೆಯಲ್ಲಿ ಜೂನ್ ತಿಂಗಳ 2ನೇ ಮಂಗಳವಾರದಂದು ಸಾರ್ವಜನಿಕವಾಗಿ ಅವರ ಜನ್ಮದಿನಾಚರಣೆ ನಡೆಯುತ್ತಿತ್ತು.
ಚಾರ್ಲ್ಸ್ ಅವರ ಜನ್ಮದಿನ ಚಳಿಗಾಲವಾದ ನ. 14ರಂದು ಇದೆ. ಹಾಗಾಗಿ ಅವರು ಬೇಸಗೆಯ ದಿನದಲ್ಲಿ ಮತ್ತೂಮ್ಮೆ ಸಾರ್ವಜನಿಕವಾಗಿ ಜನ್ಮದಿನ ಆಚರಿಸಿಕೊಳ್ಳುವ ಸಾಧ್ಯತೆಯಿದೆ.
-ರಾಜರಾಗುವ ಚಾರ್ಲ್ಸ್ ಅವರು ಬ್ರಿಟನ್ ಅಥವಾ ಬೇರಾವುದೇ ರಾಷ್ಟ್ರದ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಹಾಗೂ ಮತ ಹಾಕುವಂತಿಲ್ಲ. ಅವರ ಎಲ್ಲ ಪಕ್ಷಗಳನ್ನು ಸಮಾನವಾಗಿ ಪರಿಗಣಿಸಬೇಕು. ಸಂಸತ್ತಿನ ಅಧಿವೇಶನದ ಉದ್ಘಾಟನೆಯಲ್ಲಿ, ಪ್ರಧಾನಿಯವರೊಂದಿಗೆ ಸಾಪ್ತಾಹಿಕ ಸಭೆಯಲ್ಲಿ ಭಾಗವಹಿಸಲು ಅವರಿಗೆ ಆಮಂತ್ರಣವಿರುತ್ತದೆ.
– ಬ್ರಿಟನ್‌ನ ಜಲ ಪ್ರದೇಶದಲ್ಲಿರುವ ಕೊಕ್ಕರೆ, ಡಾಲ್ಫಿನ್, ವೇಲ್‌ಗಳು ರಾಜಮನೆತನದ ಆಸ್ತಿಯಾಗಿರುತ್ತದೆ.
– ಪ್ರತೀ 10 ವರ್ಷಗಳಿಗೊಮ್ಮೆ ರಾಜ/ರಾಣಿಗೆಂದು ಪ್ರಶಸ್ತಿ ಪುರಸ್ಕೃತ ಕವಿಯನ್ನು ನೇಮಿಸಲಾಗುತ್ತದೆ. ಅವರು ರಾಜಮನೆ ತನದ ವಿಶೇಷ ದಿನಗಳ ಕುರಿತು ಕವಿತೆಗಳನ್ನು ರಚಿಸುತ್ತಾರೆ. ಹ್ಯಾರಿ- ಮೇಘನ್ ಮಕ್ಕಳಿಗೂ ಪಟ್ಟ
ರಾಜಮನೆತನದ ಗೌರವ ನಮಗೆ ಬೇಡ ಎಂದು ಹೊರಬಂದಿದ್ದ ಮಾಜಿ ರಾಜಕುಮಾರ ಹ್ಯಾರಿ ಹಾಗೂ ಅವರ ಪತ್ನಿ ಮೇಘನ್ ಅವರ ಮಕ್ಕಳಾಗಿರುವ ಆರ್ಚಿ ಮೌಂಟ್‌ಬ್ಯಾಟನ್ ವಿಂಡ್ಸರ್ ಹಾಗೂ ಲಿಲಿಬೆಟ್ ಡಿಯಾನಾಗೆ ರಾಜಕುಮಾರ-ರಾಜಕುಮಾರಿ ಪಟ್ಟ ಈಗ ಸಿಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಾಜ 5ನೇ ಜಾರ್ಜ್ ಅವರು 1917 ರಲ್ಲಿ ರೂಪಿಸಿದ ನಿಯಮದ ಪ್ರಕಾರ ರಾಜ/ರಾಣಿಯ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ರಾಜಕುಮಾರ ಮತ್ತು ರಾಜಕುಮಾರಿ ಪಟ್ಟ ಸಿಗುತ್ತದೆ. ಮೂರು ಬಾರಿ ಭಾರತಕ್ಕೆ ಭೇಟಿ
ರಾಣಿ 2ನೇ ಎಲಿಜಬೆತ್ ಭಾರತಕ್ಕೆ 3 ಬಾರಿ ಭೇಟಿ ನೀಡಿದ್ದರು. 1961ರಲ್ಲಿ ಮೊದಲ ಬಾರಿ ಹೊಸದಿಲ್ಲಿಗೆ ಆಗಮಿಸಿದ್ದಾಗ ರಾಮಲೀಲಾ ಮೈದಾನದಲ್ಲಿ ಅದ್ದೂರಿ ಸ್ವಾಗತ ನೀಡಲಾಗಿತ್ತು. ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಸಮ್ಮುಖದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. 2ನೇ ಎಲಿಜಬೆತ್ ಅವರ ಅಜ್ಜ 5ನೇ ಕಿಂಗ್ ಜಾರ್ಜ್ ಮತ್ತು ರಾಣಿ ಮೇರಿ 1911ರಲ್ಲಿ ದೇಶಕ್ಕೆ ಭೇಟಿ ನೀಡಿದ್ದರು. ಸರಿಯಾಗಿ 50 ವರ್ಷಗಳ ಬಳಿಕ ರಾಣಿ 2ನೇ ಎಲಿಜಬೆತ್ 1961ರಲ್ಲಿ ದೇಶಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮಾ ಗಾಂಧಿಯವರಿಗೆ ಗೌರವ ಸಲ್ಲಿಸಿದ್ದರು. ಹೊಸದಿಲ್ಲಿ ಏಮ್ಸ್ ಉದ್ಘಾಟನೆ: ದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು 1961ರ ಜ. 27ರಂದು ಅವರು ಉದ್ಘಾಟಿಸಿದ್ದರು. ಇದೇ ಅವಧಿಯಲ್ಲಿ ಅವರು, ಆಗ್ರಾ, ಮುಂಬಯಿ, ವಾರಾಣಸಿ, ಉದಯಪುರ, ಜೈಪುರ, ಬೆಂಗಳೂರು, ಚೆನ್ನೈ, ಕೋಲ್ಕತಾಗೆ ಭೇಟಿ ನೀಡಿದ್ದರು. 1983ರಲ್ಲಿ ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಆಹ್ವಾನದ ಮೇರೆಗೆ ರಾಣಿ, ಅವರ ಪತಿ ಫಿಲಿಪ್ ಭಾರತ ಪ್ರವಾಸ ಕೈಗೊಂಡಿದ್ದರು. ಆ ಅವಧಿಯಲ್ಲಿ ಬ್ರಿಟನ್ ರಾಜದಂಪತಿ ರಾಷ್ಟ್ರಪತಿ ಭವನದಲ್ಲಿ ವಾಸ್ತವ್ಯ ಹೂಡಿದ್ದರು.
1997ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಐವತ್ತು ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಜಲಿಯನ್‌ವಾಲಾ ಬಾಗ್‌ಗೆ ಭೇಟಿ ನೀಡಿದ್ದರು.