Advertisement

ನ್ಯೂಡಲ್ಸ್‌- ಲೆಮನ್‌ ಜ್ಯೂಸಿಗೆ ಬೇಡಿಕೆ ಇಟ್ಟ ಕ್ವಾರಂಟೈನರ್

06:28 AM May 23, 2020 | Suhan S |

ಕೊಟ್ಟಿಗೆಹಾರ: ಬಣಕಲ್‌ನ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್‌ ಕೇಂದ್ರ ತೆರೆದಿದ್ದು ಶುಕ್ರವಾರ ಮಾಕೋನಹಳ್ಳಿಯ 7 ಮಂದಿಯನ್ನು ಕ್ವಾರಂಟೈನ್‌ಗೆ ಕರೆತರಲಾಗಿತ್ತು.

Advertisement

ಕ್ವಾರಂಟೈನರ್‌ನಲ್ಲಿರುವ ಕೆಲವರು ನ್ಯೂಡಲ್ಸ್‌, ಲೆಮನ್‌ ಜ್ಯೂಸ್‌, ಬ್ರೆಡ್‌ ಟೋಸ್ಟ್ ಬೇಕೆಂದು ಬೇಡಿಕೆ ಇಟ್ಟಿದ್ದು ಕ್ವಾರಂಟೈನ್‌ನ ಅಧಿಕಾರಿಗಳು ಹುಬ್ಬೇರಿಸುವಂತೆ ಮಾಡಿದ್ದರು. ನಂತರ ಹೊಟೇಲ್‌ ಕ್ವಾರಂಟೈನ್‌ನಲ್ಲಿ ಇರುತ್ತೇವೆ ಎಂದು ಕೆಲವರು ಪಟ್ಟು ಹಿಡಿದಿದ್ದು, ಅಧಿಕಾರಿಗಳು ಇಲ್ಲಿನ ಕ್ವಾರಂಟೈನ್‌ ಕೇಂದ್ರದಲ್ಲಿ ಎಲ್ಲಾ ಮೂಲ ಸೌಕರ್ಯಗಳಿವೆ ಎಂದು ಕ್ವಾರಂಟೈನ್‌ ನಲ್ಲಿ ಇರುವವರ ಮನವೊಲಿಸಲು ಪ್ರಯತ್ನಿಸಿದ್ದರು.

ಆದರೆ ಸಂಜೆಯ ವೇಳೆಗೆ ಬಣಕಲ್‌ ಕ್ವಾರಂಟೈನ್‌ನಲ್ಲಿದ್ದವರ 7 ಮಂದಿಯನ್ನು ಮೂಡಿಗೆರೆ ಗಿರಿದರ್ಶಿನಿ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಗಿದ್ದು ಎಲ್ಲಾ ಮೂಲ ಸೌಕರ್ಯಗಳಿದ್ದರೂ ಬಣಕಲ್‌ ಕ್ವಾರಂಟೈನ್‌ನಿಂದ ಮೂಡಿಗೆರೆ ಕ್ವಾರಂಟೈನ್‌ ಕೇಂದ್ರಕ್ಕೆ ಸ್ಥಳಾಂತರ ಮಾಡಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಎಂ. ವೆಂಕಟೇಶ್‌, ಇನ್ನೊಂದು ತಂಡ ಬಣಕಲ್‌ ನ ಕ್ವಾರಂಟೈನ್‌ ಕೇಂದ್ರ ಬರುವುದರಿಂದ ಈಗ ಇರುವ 7 ಮಂದಿಯನ್ನು ಮೂಡಿಗೆರೆಯ ಗಿರಿದರ್ಶಿನಿ ಹಾಸ್ಟೆಲ್‌ನ ಕ್ವಾರಂಟೈನ್‌ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next