ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಕಲಾಸಿಪಾಳ್ಯದಲ್ಲಿ ಬುಧವಾರ ಬಿಬಿಎಂಪಿ ಸದಸ್ಯೆಯ ಪತಿ ಮತ್ತು ಬೀದಿ ಬದಿ ವ್ಯಾಪಾರಿಗಳ ನಡುವೆ ನಡೆದ ಜಗಳ, ಪ್ರತಿಭಟನೆ ನಡೆದು, ಪರಸ್ಪರ ದೂರು ದಾಖಲಿಸಿದ್ದಾರೆ. ಫುಟ್‌ಪಾತ್ ಮೇಲೆ ಹಾಕಲಾಗಿದ್ದ ತರಕಾರಿ ಮಳಿಗೆಗಳನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳ ಜತೆ ತೆರಳಿದಾಗ ಬೀದಿ ಬದಿ ವ್ಯಾಪಾರಿಗಳು ಸಗಣಿ ಎರಚಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಕಾರ್ಪೊರೇಟರ್ ಪ್ರತಿಭಾ ಪತಿ ಧನರಾಜ್ ಹಾಗೂ ಅವರ ಪುತ್ರ ವೈಷ್ಣವ್ ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದರೆ, ಧನರಾಜ್ ದಬ್ಟಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ವ್ಯಾಪಾರಿಗಳೂ ಪ್ರತಿಭಟಿಸಿದರು.
ಕಲಾಸಿಪಾಳ್ಯದ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ಬೆಳಗ್ಗೆ ಆರು ಗಂಟೆಗೆ ಕಲಾಸಿಪಾಳ್ಯ ಪೊಲೀಸರು ಸಗಣಿ ಎರಚಿದ ತರಕಾರಿ ವ್ಯಾಪಾರಿಗಳಾದ ಸೆಂದಿಲ್ ಹಾಗೂ ಇತರರ ವಿರುದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೂಂದೆಡೆ ಧನರಾಜ್ ವಿರುದಟಛಿ ಬೀದಿ ಬದಿ ವ್ಯಾಪಾರಿಗಳು ಪ್ರಕರಣ ದಾಖಲಿಸಿದ್ದಾರೆ. ಕಲಾಸಿಪಾಳ್ಯದ ಫುಟ್‌ಪಾತ್‌ಗಳ ಮೇಲೆ ಬೀದಿ ಬದಿ ವ್ಯಾಪಾರಿಗಳು ತೆರೆದಿದ್ದ ಮಳಿಗೆಗಳನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿ ರವೀಂದ್ರ ಹಾಗೂ ಇತರರ ಜತೆ ಧನರಾಜ್ ಮಾರುಕಟ್ಟೆಗೆ ಬಂದಿದ್ದರು.
ಫುಟ್‌ಪಾತ್ ಮೇಲೆ ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳನ್ನು ಈ ಬಗ್ಗೆ ಪ್ರಶ್ನಿಸಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ, ತೆರವುಗೊಳಿಸಲು ಅಧಿಕಾರಿಗಳು ಬರುವ ಸುದ್ದಿ ಮೊದಲೇ ತಿಳಿದುಕೊಂಡಿದ್ದ ವ್ಯಾಪಾರಿಗಳು ಸಗಣಿ ಪ್ಯಾಕೆಟ್ ರೆಡಿ ಮಾಡಿಕೊಂಡಿದ್ದರು. ಮಳಿಗೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಧನರಾಜ್ ಹಾಗೂ ಅವರ ಪುತ್ರನ ವೈಷ್ಣವ್ ಮೇಲೆ ಏಕಾಏಕಿ ಸಗಣಿ ಪ್ಯಾಕೆಟ್ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಕೂಡಲೇ ಧನರಾಜ್ ಬೆಂಬಲಿಗರು ಮತ್ತು ಸ್ಥಳೀಯ ವ್ಯಾಪಾರಿಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, ಪರಸ್ಪರ ಹೊಡೆದಾಟ ನಡೆಸಿದ್ದಾರೆ.
ಸ್ಥಳೀಯರು ಹಾಗೂ ಬಿಬಿಎಂಪಿ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಇಬ್ಬರನ್ನೂಸಮಾಧಾನಪಡಿಸಿದರು ಎಂದರು. ಪ್ರತಿಭಟನೆ, ಬಿಗುವಿನ ವಾತಾವರಣ: ಘಟನೆಯಿಂದ ಆಕ್ರೋಶಗೊಂಡ ಧನರಾಜ್ ತಮ್ಮ ಬೆಂಬಲಿಗರ ಜತೆ ಸೇರಿ ರಸ್ತೆಯಲ್ಲೇ ಕುಳಿತು ಧರಣಿ ನಡೆಸಿ ಸಗಣಿ ಎಸೆದ ಆರೋಪಿ ಗಳನ್ನು ಕೊಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ಅದಕ್ಕೆ ಪ್ರತಿಯಾಗಿ ವ್ಯಾಪಾರಿಗಳ ಗುಂಪೊಂದು ಪ್ರತಿಭಟನೆ ನಡೆಸಿತು. ಪೊಲೀಸರು ಗುಂಪುಗಳ ಮನವೊಲಿಸಲು ಹರಸಾಹಸಪಟ್ಟರು.
ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿನ ಮಳಿಗೆಗಳನ್ನು ಈಗಾಗಲೇ ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರ ಮಾಡ ಲಾಗಿದೆ. ಆದರೆ, ಇಲ್ಲಿ ಕೆಲವು ವ್ಯಾಪಾರಿ ಗಳು ಅನಧಿಕೃತವಾಗಿ ವ್ಯಾಪಾರ ಮಾಡ ಲು ಪ್ರಾರಂಭಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಹಾಗೂ ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಮಳಿಗೆಗಳನ್ನು ತೆರವು ಮಾಡಲಾಗಿದೆ.
-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ
ಗಲಾಟೆ ನಡೆದ ವೇಳೆ ನಾನು ಅಲ್ಲಿರಲಿಲ್ಲ. ಈ ಭಾಗದಲ್ಲಿ ಅನಧಿಕೃತವಾಗಿ ರಸ್ತೆಯಲ್ಲಿ ಕುಳಿತು ವ್ಯಾಪಾರ ನಡೆಯುತ್ತಿರುವವರ ವಿರುದಟಛಿ ಸ್ಥಳೀಯ ಪಾಲಿಕೆ ಸದಸ್ಯರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಭೇಟಿ ನೀಡಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿದ್ದ ಒಂದು ಸಾವಿರ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ.
-ರವೀಂದ್ರ, ವಿಶೇಷ ಆಯುಕ್ತ, ಮಾರುಕಟ್ಟೆ