Advertisement

ಪೌಷ್ಟಿಕ ಆಹಾರದಿಂದ ಗುಣಮಟ್ಟದ ಹಾಲು

12:23 PM Feb 22, 2018 | |

ದೇವನಹಳ್ಳಿ: ರಾಸುಗಳಿಗೆ ಪೌಷ್ಟಿಕ ಆಹಾರಗಳನ್ನು ಸರಿಯಾದ ಸಮಯದಲ್ಲಿ ನೀಡಬೇಕು. ರೈತರು ಹೈನುಗಾರಿಕೆ ಮಾಡಬೇಕಾದರೆ ಸರಿಯಾದ ರೀತಿಯಲ್ಲಿ ಮಾಹಿತಿ ಪಡೆದುಕೊಂಡು ಪೌಷ್ಟಿಕ ಆಹಾರ ನೀಡಿದರೆ ಹೆಚ್ಚಿನ ಗುಣಮಟ್ಟದ ಹಾಲು ಪಡೆದುಕೊಳ್ಳಬಹುದು ಎಂದು ತಾಲೂಕು ಪಶು ಸಂಗೋಪನೆಯ ಸಾಹಾಯಕ ನಿರ್ದೇಶಕ ಡಾ. ಜನಾರ್ದನ್‌ ತಿಳಿಸಿದರು.

Advertisement

ತಾಲೂಕಿನ ಬಿದಲೂರು ಗ್ರಾಮದಲ್ಲಿ ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ವಾರ್ಷಿಕ ಶಿಬಿರದ ಅಂಗವಾಗಿ ಪಶು ವೈದ್ಯ, ರಾಸುಗಳ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. 

ಪೌಷ್ಟಿಕಾಂಶ ಇಲ್ಲದಿದ್ದರೆ ಬರಡು: ರಾಸುಗಳ ಹಾಲನ್ನು ರೈತರು ಅದನ್ನು ಲೆಕ್ಕಾಚಾರ ಹಾಕಿಕೊಳ್ಳದೆ ಬರುವ
ಹಾಲನ್ನು ಕರೆದುಕೊಳ್ಳುತ್ತಾರೆ. ಇದರಿಂದ ಅಂಥ ಹಾಲಿನಲ್ಲಿ ಕೊಬ್ಬಿನಾಂಶ ಬರುವುದರಿಂದ ರಾಸುವಿಗೆ ಪೌಷ್ಟಿಕಾಂಶ ಸಿಗುವುದಿಲ್ಲ. ಇದರಿಂದ ಬರಡು ರಾಸುಗಳಾಗುತ್ತವೆ ಎಂದು ಎಚ್ಚರಿಸಿದರು. 

ವೈದ್ಯರು ಹೇಳುವ ಸಲಹೆ ಪಾಲಿಸಿ: ರೈತರು ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು. ಇದರಿಂದ ರೋಗ ರುಜಿನು ತಡೆಗಟ್ಟಲು ಸಹಕಾರಿಯಾಗುತ್ತದೆ. ವೈದ್ಯರು ಹೇಳುವ ಸಲಹೆ ಮಾರ್ಗದರ್ಶನ ಸರಿಯಾದ ರೀತಿ ಪಾಲಿಸಬೇಕು ಎಂದು ರೈತರಿಗೆ ಸಲಹೆ ಮಾಡಿದರು. 

ಹಸುಗಳ ಆರೋಗ್ಯದ ಕಡೆ ಹೆಚ್ಚಿನ ಒತ್ತು ನಿಡಿ: ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್‌
ಮಾತನಾಡಿ, ಹಾಲು ಉತ್ಪಾದನೆ ರಾಜ್ಯದ ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಯಲ್ಲಿ
ವಿಶಿಷ್ಟ ಸ್ಥಾನ ಹೊಂದಿದೆ. ಲಕ್ಷಾಂತರ ಕುಂಟುಂಬಗಳಿಗೆ ಜೀವನಾಧಾರ ನೀಡುವ ಮುಖ್ಯ ಕಸುಬಾಗಿದೆ.
ಹಾಲು ಮತ್ತು ಹಾಲು ಉತ್ಪನ್ನಗಳ ಸೇವನೆಯಿಂದ ಉತ್ತಮವಾದ ಆರೋಗ್ಯ ವೃದ್ಧಿಸಿಕೊಳ್ಳಬಹುದಾಗಿದೆ.
ಹಸುಗಳ ಆರೋಗ್ಯದ ಕಡೆ ಹೆಚ್ಚಿನ ಒತ್ತು ರೈತರು ನೀಡಬೇಕು ಎಂದು ಹೇಳಿದರು.

Advertisement

ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಬಿ.ಚಂದ್ರಶೇಖರ್‌, ಪಶುವೈದ್ಯಾಧಿಕಾರಿ ಡಾ.ಕಾಂತರಾಜು, ಡಾ.ಬಸವರಾಜು, ಮಧುಸೂದನ್‌, ಡಾ.ಮಂಜುನಾಥ್‌, ಗ್ರಾಪಂ ಸದಸ್ಯ ನಂದಕುಮಾರ್‌, ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಡಾ.ಸಜ್ಜಾದ್‌ ಪಾಷಾ, ಸಹಾಯಕ ಪ್ರಾಧ್ಯಾಪಕಿ ಪ್ರೊ.ದೇವಿ, ಎಂಪಿಸಿಎಸ್‌ ಅಧ್ಯಕ್ಷ ಮುನಿ ನಾರಾಯಣಪ್ಪ ಮತ್ತಿತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next