ಇಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಆಶ್ರಯದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರವು ಒಂದು ವಾರದ ಸಾಂಸ್ಕೃತಿಕ ಕಾರ್ಯಕ್ರಮ ” ಐಸಿಸಿ ಬುಧವಾರ ಫಿಯೆಸ್ಟಾ ‘ ಕಾರ್ಯಕ್ರಮವನ್ನು ಆಯೋಜಿಸಿತು. ಓಣಂ ಹಬ್ಬದ ಆಚರಣೆಯ ಸಂಕೇತವಾಗಿ ಇದನ್ನು ಆಚರಿಸಲಾಗಿದೆ. ಕನ್ನಡಿಗರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸಮುದಾಯದವರು ಇದರಲ್ಲಿ ಪಾಲ್ಗೊಂಡರು.
ಐಸಿಸಿಯ ಕಾನ್ಸುಲರ್ ಮತ್ತು ಎಚ್‌ಆರ್ ಮುಖ್ಯಸ್ಥರಾದ ಸಜೀವ್ ಸತ್ಯಸೀಲನ್ ಅವರು ಅತಿಥಿಗಳನ್ನು ಹಾಗೂ ಗಣ್ಯರನ್ನು ಸ್ವಾಗತಿಸಿದರು. ಐಸಿಸಿಯ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಟಾಗಿಲು ಅವರು ಓಣಂ ಹಬ್ಬದ ಶುಭ ಹಾರೈಕೆಗಳನ್ನು ತಿಳಿಸಿದರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮವಾಗಿ ಸ್ಪಂದಿಸಿದ ಸಮುದಾಯದವರಿಗೆ ಕೃತಜ್ಞತೆ ತಿಳಿಸಿದರು. ಐಸಿಸಿಯ ಕಾರ್ಯದರ್ಶಿ ಅಬ್ರಹಾಂ ಜೋಸೆಫ್ ಧನ್ಯವಾದ ಮಾಡಿದರು.
ಸುಮಾ ಗೌಡ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ಪಂಜಾಬಿ ಅಸೋಸಿಯೇಶನ್ ಆಫ್ ಇಂಡಿಯನ್ಸ್ ಅಧ್ಯಕ್ಷರಾದ ಸತ್ನಾಮ್ ಸಿಂಗ್ ಮತ್ತಯ ನೋವರ್ ಕತಾರ್ ಅಧ್ಯಕ್ಷರಾದ ನಿಖೀಲ್ ಸಸಿಧರನ್ ಅವರನ್ನು ಐಸಿಸಿ ವ್ಯವಸ್ಥಾಪಕ ಸಮಿತಿಯ ವತಿಯಿಂದ ಸಮ್ಮಾನಿಸಲಾಯಿತು.