Advertisement

Qatar: ಭಾರತೀಯ ನೌಕಾಪಡೆ ಮಾಜಿ ಸಿಬಂದಿಗಳಿಗೆ 3ರಿಂದ25 ವರ್ಷ ಜೈಲು ಶಿಕ್ಷೆ

12:07 AM Dec 30, 2023 | Team Udayavani |

ಹೊಸದಿಲ್ಲಿ: ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ಮಾಜಿ ಸಿಬಂದಿಗೆ ಗಲ್ಲು ಸಜೆಯನ್ನು ಜೈಲು ಶಿಕ್ಷೆಯಾಗಿ ಪರಿವರ್ತಿಸಲಾಗಿದೆ.

Advertisement

ಸಿಬಂದಿಯನ್ನು 3ರಿಂದ 25 ವರ್ಷಗಳ ವರಗೆ ಜೈಲಿನಲ್ಲಿರಿಸಲು ಕತಾರ್‌ ನ್ಯಾಯಾಲಯ ಆದೇಶ ಹೊರಡಿ ಸಿದೆ. ಗುರುವಾರವಷ್ಟೇ ಅವರಿಗೆ ನೀಡ ಲಾಗಿದ್ದ ಗಲ್ಲು ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಿ ಕತಾರ್‌ ಸರಕಾರ ತೀರ್ಮಾನ ಪ್ರಕಟಿಸಿತ್ತು. ಶಿಕ್ಷೆಗೆ ಗುರಿಯಾದವರ ಪೈಕಿ ಓರ್ವ ನಾವಿಕರಿದ್ದು, ಅವರಿಗೆ ಮಾತ್ರ 3 ವರ್ಷಗಳ ಅವಧಿಯ ಜೆಲು ಶಿಕ್ಷೆ ವಿಧಿಸಲಾಗಿದೆ. ಉಳಿದಂತೆ ಇಬ್ಬರು ಅಧಿಕಾರಿಗಳಿಗೆ 10 ವರ್ಷ, ನಾಲ್ವರಿಗೆ 15 ವರ್ಷ ಮತ್ತು ದಹ್ರಾ ಗ್ಲೋಬಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಧಿಕಾರಿಗೆ 25 ವರ್ಷಗಳ ಸಜೆ ವಿಧಿಸಲಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next