Advertisement

ಮಂಡ್ಯದ ಮುಸ್ಕಾನ್ ಹಾಡಿ ಹೊಗಳಿದ ಮೋಸ್ಟ್ ವಾಂಟೆಡ್ ಅಲ್-ಖೈದಾ ಉಗ್ರ !

02:14 PM Apr 06, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಆರಂಭಾವಾಗಿದ್ದ ಹಿಜಾಬ್ ವಿವಾದಕ್ಕೆ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಕೂಡ ಧುಮುಕಿದ್ದು, ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಮುಸ್ಲಿಮರು ಅದನ್ನು ಧರಿಸಲು ಹೋರಾಡುತ್ತಿರುವ ಹುಡುಗಿಯರನ್ನು ಬಹಿರಂಗವಾಗಿ ಬೆಂಬಲಿಸಬೇಕು ಎಂದು ಅಲ್-ಖೈದಾ ನಾಯಕ, ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಅಲ್-ಜವಾಹಿರಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ.

Advertisement

ಡೈಲಿ ಮೇಲ್‌ನ ವೆಬ್‌ಸೈಟ್‌ನಲ್ಲಿ ಪ್ರಸ್ತುತಪಡಿಸಲಾದ ಈ 9 ನಿಮಿಷಗಳ ವೀಡಿಯೊದಲ್ಲಿ ಜವಾಹಿರಿ ‘ಭಾರತದ ಹಿಂದೂ ಪ್ರಜಾಪ್ರಭುತ್ವದಲ್ಲಿ ಮುಸ್ಲಿಮರು ಕಿರುಕುಳಕ್ಕೊಳಗಾಗಿದ್ದಾರೆ. ಅವರು ಕರ್ನಾಟಕ ಹಿಜಾಬ್ ವಿವಾದದ ಸಮಯದಲ್ಲಿ ಬೆಳಕಿಗೆ ಬಂದ ಮಂಡ್ಯದ ಮುಸ್ಕಾನ್ ಳನ್ನು ‘ಮಹಾನ್ ಹುಡುಗಿ’ ಎಂದು ಕರೆದಿದ್ದಾನೆ.

ದಿ ನೋಬಲ್ ವುಮನ್ ಆಫ್ ಇಂಡಿಯಾ ಎಂಬ ಶೀರ್ಷಿಕೆಯಿರುವ ವೀಡಿಯೋದಲ್ಲಿ ಮುಸ್ಕಾನ್‍ಳನ್ನು ಹೊಗಳಿ ರಚಿಸಿದ ಶಾಹಿರಿಯಲ್ಲಿ, ಮುಸ್ಕಾನ್ ಕುರಿತು ವೀಡಿಯೋಗಳನ್ನು ನೋಡಿ ತಿಳಿದುಕೊಂಡಿದ್ದೇನೆ. ಇವಳಿಂದ ತುಂಬಾ ಪ್ರಭಾವಿತರಾಗಿದ್ದೇವೆ ಎಂದು ಹೇಳಲಾಗಿದೆ. ಇದೆ ವೇಳೆ ಹಿಜಾಬ್ ನಿಷೇಧಿಸಿದ ದೇಶಗಳ ಮೇಲೆ ಆಕ್ರೋಶ ಹೊರ ಹಾಕಿದ್ದಾನೆ.

ಮುಸ್ಕಾನ್ ಹಿಜಾಬ್ ವಿವಾದದ ವೇಳೆ ಕಾಲೇಜ್ ಆವರಣದಲ್ಲಿ ಹಿಂದೂ ವಿದ್ಯಾರ್ಥಿಗಳು ಜೈ ಶ್ರೀರಾಮ್ ಕೂಗುತ್ತಿದ್ದಾಗ ಅಲ್ಲಾ ಹೂ ಅಕ್ಬರ್ ಎಂದು ಘೋಷಣೆ ಕೂಗಿ ವಿದ್ಯಾರ್ಥಿಗಳ ಗುಂಪಿನತ್ತ ಮುನ್ನುಗ್ಗಿ ವಿಶ್ವಾದ್ಯಂತ ಸುದ್ದಿಯಾಗಿದ್ದಳು. ಆಕೆಗೆ ಭಾರಿ ಪ್ರಮಾಣದಲ್ಲಿ ಪ್ರಶಂಸೆಗಳು ಮತ್ತು ಹಣವನ್ನು ಬಹುಮಾನಗಳ ರೂಪದಲ್ಲಿ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next