Advertisement

ಪ್ರತ್ಯೇಕ ಎನ್ ಕೌಂಟರ್: ಏಳು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

08:34 AM Apr 10, 2021 | Team Udayavani |

ಜಮ್ಮು ಕಾಶ್ಮೀರ: ದಕ್ಷಿಣ ಕಾಶ್ಮೀರದಲ್ಲಿ ಶುಕ್ರವಾರ ನಡೆದ ಎರಡು ಪ್ರತ್ಯೇಕ ಎನ್ ಕೌಂಟರ್ ನಲ್ಲಿ  ಅಲ್ ಖೈದಾ ಉಗ್ರ ಸಂಘಟನೆಯ ಅಂಗಸಂಸ್ಥೆ ಅನ್ಸಾರ್ ಗಜ್ವತ್ ಉಲ್ ಹಿಂದ್ (ಎಜಿಹೆಚ್) ಮುಖ್ಯಸ್ಥ ಸೇರಿದಂತೆ ಏಳು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

Advertisement

ಪುಲ್ವಾಮಾದ ಟ್ರಾಲ್ ಪ್ರದೇಶದಲ್ಲಿರುವ ತೋಟದೊಳಗಿನ ಅಡಗುತಾಣವೊಂದರಲ್ಲಿ ನಡೆದ ಏನ್ ಕೌಂಟರ್  ನಲ್ಲಿ ಎಜಿಹೆಚ್ ಮುಖ್ಯಸ್ಥ ಇಮ್ತಿಯಾಜ್ ಷಾ ಹಾಗೂ ಮತ್ತೊಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ಶೋಪಿಯಾನ್‌  ಅಡಗಿಕೊಂಡಿದ್ದ ಐವರು ಉಗ್ರರನ್ನು  ಕೂಡ ಶುಕ್ರವಾರ (9-4-2021) ರಾತ್ರಿ ಎನ್ ಕೌಂಟರ್ ಮೂಲಕ  ಸದೆಬಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಆಂಜನೇಯನ ಮೇಲೆ ಆಂಧ್ರದ “ಅಧಿಕಾರ’! ಆಂಜನೇಯ ಹುಟ್ಟಿದ್ದು ತಿರುಪತಿಯಲ್ಲಂತೆ

ಕಾಶ್ಮೀರ ವಲಯದ ಐಜಿ ವಿಜಯ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಶೋಪಿಯಾನ್‌ನಲ್ಲಿ ಹತ್ಯೆಯಾದ ಐದು ಉಗ್ರರಲ್ಲಿ ಇಬ್ಬರು ಹಿಜ್ಬುಲ್-ಉಲ್-ಮುಜಾಹಿದ್ದೀನ್‌ಗೆ ಸೇರಿದವರು. ಓರ್ವ ಲಷ್ಕರ್-ಎ-ತೋಯಿಬಾ ಮತ್ತು ಇನ್ನೆರಡು ಮಂದಿ ಎಜಿಎಚ್‌ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಎನ್ ಕೌಂಟರ್ ಸ್ಥಳದಿಂದ ಏಳು ಏಕೆ-47 ರೈಫಲ್ಸ್, 2 ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.  ಹತ್ಯೆಯಾದ ಉಗ್ರರು 2019ರಿಂದಲೂ ಉಗ್ರ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಈ ಉಗ್ರರು ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಮುಷ್ಕರ ನಿಷೇಧ: ಕಾರ್ಮಿಕ ಇಲಾಖೆಯಿಂದ ಆದೇಶ

Advertisement

Udayavani is now on Telegram. Click here to join our channel and stay updated with the latest news.

Next