Advertisement
ಬಿಳಿಗಿರಿರಂಗನಬೆಟ್ಟದ ಬಳಿ ಇರುವ ಜಮೀನಿನಲ್ಲಿ ಹೆಬ್ಟಾವುಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಆಗಾಗಆಹಾರ ಅರಸಿ ಬರುತ್ತವೆ. ಈ ಹಾವು 7 ಅಡಿ ಉದ್ದವಿದ್ದು, ಸುಮಾರು 2 ವರ್ಷದ ಪ್ರಾಯದ್ದಾಗಿದೆ. ಹಾವು ಕಂಡ ತಕ್ಷಣ
ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ನೇಕ್
ಮಹೇಶ್ ಜೊತೆ ಸೇರಿ ಹಾವನ್ನು ಹಿಡಿದು ನಂತರ ಪಕ್ಕದ ಬಿಳಿಗಿರಿರಂಗನಬೆಟ್ಟ ಕಾಡಿಗೆ ಬಿಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್, ಹೆಬ್ಟಾವುಗಳು ರೈತನ ಮಿತ್ರವಾಗಿದ್ದು, ಇದರ ಬಗ್ಗೆ ಸಾಮಾನ್ಯ ಜನರು ಅರಿವು ಮೂಡಿಸಿಕೊಳ್ಳಬೇಕು ಎಂದರು. ಅರಣ್ಯ ಇಲಾಖೆಯ ರಘುರಾಮು, ಮಲ್ಲಪ್ಪ ಇದ್ದರು.