Advertisement

PV Sindhu: ಐಪಿಎಲ್‌ ತಂಡದ ಜತೆ ಕೆಲಸ ಮಾಡಿದ ಉದ್ಯಮಿಯ ಕೈಹಿಡಿಯಲಿದ್ದಾರೆ ಪಿ.ವಿ.ಸಿಂಧು

08:11 AM Dec 03, 2024 | Team Udayavani |

ಹೈದರಾಬಾದ್‌: ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು (PV Sindhu) ಡಿ.22ಕ್ಕೆ ಉದಯಪುರದಲ್ಲಿ ವಿವಾಹವಾಗಲಿದ್ದಾರೆ.

Advertisement

ಸಿಂಧು ಉದ್ಯಮಿ ಹೈದರಾಬಾದ್‌ ಮೂಲದ ಉದ್ಯಮಿ ವೆಂಕಟದತ್ತ ಸಾಯಿ (Venkata Datta Sai) ಯನ್ನು ವರಿಸಲಿದ್ದಾರೆ ಎಂದು ತಂದೆ ಪಿ.ವಿ.ರಮಣ ಹೇಳಿದ್ದಾರೆ.

ಸೈಯದ್‌ ಮೋದಿ ಬ್ಯಾಡ್ಮಿಂಟನ್‌ ಪ್ರಶಸ್ತಿ ಗೆದ್ದು, ಸಿಂಧು ತಮ್ಮ ದೀರ್ಘ‌ ಪ್ರಶಸ್ತಿ ಬರವನ್ನು ನೀಗಿಸಿಕೊಂಡ ದಿನದ ಬಳಿಕ ಅವರ ವಿವಾಹದ ಘೋಷಣೆ ಮಾಡಲಾಗಿದೆ.

ವಿವಾಹ ಕಾರ್ಯಕ್ರಮಗಳು ಡಿಸೆಂಬರ್ 20 ರಂದು ಪ್ರಾರಂಭವಾಗಲಿದ್ದು, ಎರಡು ಕುಟುಂಬಗಳು ಡಿಸೆಂಬರ್ 24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆಯನ್ನೂ ನಡೆಸಲಿವೆ ಎಂದು ವರದಿಯಾಗಿದೆ.

Advertisement

“ಎರಡು ಕುಟುಂಬಗಳು ಪರಸ್ಪರ ಪರಿಚಯವಿದ್ದವು. ಆದರೆ ಕೇವಲ ಒಂದು ತಿಂಗಳ ಹಿಂದೆ ಎಲ್ಲವನ್ನೂ ಅಂತಿಮಗೊಳಿಸಲಾಗಿದೆ. ಜನವರಿಯಿಂದ ಸಿಂಧು ವೇಳಾಪಟ್ಟಿ ಬಿಗಿಯಾಗಿರಲಿರುವ ಸಾಧ್ಯತೆಯಿರುವ ಕಾರಣದಿಂದ ಇದೇ ಸಮಯ ಸೂಕ್ತವಾಗಿದೆ” ಎಂದು ಸಿಂಧು ತಂದೆ ಪಿವಿ ರಮಣ ಪಿಟಿಐಗೆ ತಿಳಿಸಿದ್ದಾರೆ.

ಯಾರು ಈ ವೆಂಕಟದತ್ತ ಸಾಯಿ?

ವೆಂಕಟ ದತ್ತ ಸಾಯಿ ಅವರು ಫೌಂಡೇಶನ್ ಆಫ್ ಲಿಬರಲ್ ಮತ್ತು ಮ್ಯಾನೇಜ್‌ಮೆಂಟ್ ಎಜುಕೇಶನ್‌ನಿಂದ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್/ಲಿಬರಲ್ ಸ್ಟಡೀಸ್‌ನಲ್ಲಿ ಡಿಪ್ಲೊಮಾ ಮಾಡಿದರು. ಅವರು 2018 ರಲ್ಲಿ ಫ್ಲೇಮ್ ಯೂನಿವರ್ಸಿಟಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ನಿಂದ ತಮ್ಮ ಬಿಬಿಎ ಅಕೌಂಟಿಂಗ್ ಮತ್ತು ಫೈನಾನ್ಸ್ ಪೂರ್ಣಗೊಳಿಸಿದ್ದರು. ನಂತರ ಬೆಂಗಳೂರಿನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿಯಿಂದ ಡೇಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ್ದರು.

ವೆಂಕಟ ದತ್ತ ಸಾಯಿ ಜೆಎಸ್‌ ಡಬ್ಲ್ಯೂ ನೊಂದಿಗೆ ಬೇಸಿಗೆಯ ಇಂಟರ್ನ್ ಮತ್ತು ಆಂತರಿಕ ಸಲಹೆಗಾರರಾಗಿ ಕೆಲಸ ಮಾಡಿದ್ದರು. “ಐಪಿಎಲ್ ತಂಡದ ನಿರ್ವಹಣೆಗೆ ಹೋಲಿಸಿದರೆ ಹಣಕಾಸು ಮತ್ತು ಅರ್ಥಶಾಸ್ತ್ರದಲ್ಲಿ ನನ್ನ ಬಿಬಿಎ ಮಸುಕಾಗಿದೆ, ಆದರೆ ಈ ಎರಡೂ ಅನುಭವಗಳಿಂದ ನಾನು ಬಹಳಷ್ಟು ಕಲಿತಿದ್ದೇನೆ ಎಂದು ಒಪ್ಪಿಕೊಳ್ಳಬೇಕು” ಎಂದು ಅವರು ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next