Advertisement

ಬೆಳ್ಳಿತಾರೆ ಪಿ.ವಿ. ಸಿಂಧುಗೆ ವಿಮಾನದಲ್ಲಿ ಸಿಬಂದಿಯ ಕಿರುಕುಳ 

02:37 PM Nov 04, 2017 | |

ಮುಂಬಯಿ: ಒಲಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ, ಪ್ರಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿಗೆ ವಿಮಾನದಲ್ಲಿಯೇ  ಸಿಬಂದಿಯೊಬ್ಬ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ.

Advertisement

ಈ ವಿಚಾರವನ್ನು ಶನಿವಾರ ಸ್ವತಃ ಸಿಂಧು ಅವರೇ ಟ್ವೀಟರ್‌ನಲ್ಲಿ ಬರೆದುಕೊಂಡು, ತನಗಾದ ಕಿರುಕುಳವನ್ನು ಬಹಿರಂಗಪಡಿಸಿದ್ದಾರೆ.

‘ಮುಂಬಯಿಗೆ ಪ್ರಯಾಣಿಸುತ್ತಿದ್ದ ವೇಳೆ ಇಂಡಿಗೋ 6 ಇ 608 ಸಂಖ್ಯೆಯ ವಿಮಾನದಲ್ಲಿ ನನಗೆ ಅತ್ಯಂತ ಕೆಟ್ಟ ಅನುಭವವಾಯಿತು. ಅಜಿತೇಶ್‌ ಎಂಬ ಸಿಬಂದಿ  ಕಿರುಕುಳ ನೀಡಿದ್ದಾನೆ’ ಎಂದು ಸಿಂಧು ಟ್ವೀಟ್‌ ಮಾಡಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ‘ಅಜಿತೇಶ್‌ ನನ್ನೊಂದಿಗೆ ತೀರಾ ಕೆಟ್ಟದಾಗಿ ನಡೆದುಕೊಂಡಿದ್ದು, ಗಗನಸಖಿ  ಬಂದು ಆ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದರೂ ಆತ ಆಕೆಯೊಂದಿಗೂ ಅನುಚಿತವಾಗಿ ವರ್ತಿಸಿದ. ನನಗೆ ಇದು ತೀವ್ರ ಅಚ್ಚರಿ ಉಂಟು ಮಾಡಿತು. ಇಂತಹ ಕೆಲಸಗಾರರು ಇಂಡಿಗೋದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿದ್ದರೆ ಸಂಸ್ಥೆಯ ಹೆಸರು ಕೆಡಿಸುತ್ತಾರೆ’ ಎಂದು ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next