Advertisement

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಲಕ್ಷ್ಯಸೇನ್‌ ಸೆಮಿ ಪ್ರವೇಶ

10:36 PM Jan 14, 2022 | Team Udayavani |

ಹೊಸದಿಲ್ಲಿ: “ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಲ್ಲಿ ಆತಿಥೇಯ ನಾಡಿನ ಪಿ.ವಿ. ಸಿಂಧು, ಲಕ್ಷ್ಯಸೇನ್‌ ಸೆಮಿಫೈನಲ್‌ ತಲುಪಿದ್ದಾರೆ.

Advertisement

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ನಲ್ಲಿ ಅನುಭವಿ ಸಿಂಧು ಭಾರತದವರೇ ಆದ ಅಶ್ಮಿತಾ ಚಾಲಿಹಾ ಅವರನ್ನು 21-7, 21-18 ನೇರ ಗೇಮ್‌ಗಳಿಂದ ಹಿಮ್ಮೆಟ್ಟಿಸಿದರು.

ಪುರುಷರ ಸಿಂಗಲ್ಸ್‌ ಹೋರಾಟದಲ್ಲಿ ವಾಕ್‌ ಓವರ್‌ ಪಡೆದು ಆಡಲಿಳಿದಿದ್ದ ಎಚ್‌.ಎಸ್‌. ಪ್ರಣಯ್‌ ಅವರು ಲಕ್ಷ್ಯಸೇನ್‌ ವಿರುದ್ಧ ದೀರ್ಘ‌ ಹೋರಾಟ ನಡೆಸಿ ಸೋಲನು ಭವಿಸಿದರು. ಲಕ್ಷ್ಯಸೇನ್‌ ಗೆಲುವಿನ ಅಂತರ 14-21, 21-9, 21-14.

ಇದನ್ನೂ ಓದಿ:ಬಿಪಿನ್ ರಾವತ್ ಹೆಲಿಕಾಪ್ಟರ್‌ ದುರಂತಕ್ಕೆ ಪ್ರತಿಕೂಲ ಹವಾಮಾನವೇ ಕಾರಣ!

ಆಕರ್ಷಿ ಸೆಮಿ ಪ್ರವೇಶ
ವನಿತಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್‌ ಕೂಡ ಸೆಮಿಫೈನಲ್‌ ತಲುಪಿ ದ್ದಾರೆ. ಅವರು ಭಾರತದ ಮತ್ತೋರ್ವ ಸ್ಪರ್ಧಿ ಮಾಳವಿಕಾ ಬನ್ಸೋಡ್‌ ವಿರುದ್ಧ 21-12, 21-15 ಅಂತರದ ಗೆಲುವು ಸಾಧಿಸಿದರು. ಆಕರ್ಷಿ ಅವರ ಸೆಮಿ ಫೈನಲ್‌ ಎದುರಾಳಿ ಥಾಯ್ಲೆಂಡ್‌ನ‌ ಬುಸಾನನ್‌ ಮ್ರುಂಗಫಾನ್‌.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next