ಹೊಸದಿಲ್ಲಿ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಅವರಿಗೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) ವಿಶೇಷ ಗೌರವ ನೀಡಿದೆ. ಅವರನ್ನು ಬಿಡಬ್ಲ್ಯುಎಫ್ ಆ್ಯತ್ಲೀಟ್ಸ್ ಕಮಿಷನ್‌ನ ಸದಸ್ಯೆಯನ್ನಾಗಿ ನೇಮಿಸಿದೆ.
ಬಿಡಬ್ಲ್ಯುಎಫ್ ಒಟ್ಟು 6 ಮಂದಿಗೆ ಈ ಗೌರವ ನೀಡಿದೆ. ಉಳಿದವರೆಂದರೆ ಐರಿಸ್ ವಾಂಗ್ (ಅಮೆರಿಕ), ರಾಬಿನ್ ಟಬೆಲಿಂಗ್ (ನೆದರ್ಲೆಂಡ್ಸ್), ಗ್ರೇಸಿಯಾ ಪೊಲೀ (ಇಂಡೋನೇಶ್ಯ), ಕಿಮ್ ಸೊಯಾಂಗ್ (ಕೊರಿಯಾ) ಮತ್ತು ಜೆಂಗ್ ಸಿ ವೀ (ಚೀನ).
ಇದು ಹೆಮ್ಮೆಯ ಸಂಗತಿಯಾಗಿದ್ದು, ಬಿಡಬ್ಲ್ಯುಎಫ್ ಕರ್ತವ್ಯವನ್ನು ನಿಭಾಯಿಸಬಲ್ಲೆ ಎಂದಿದ್ದಾರೆ ಸಿಂಧು.
ಇದನ್ನೂ ಓದಿ:2023ರಲ್ಲೂ ಕೇಂದ್ರದಲ್ಲಿ ಪ್ರಧಾನಿ ಮೋದಿ ಮೋಡಿ ಮುಂದುವರಿಯಲಿದೆ : ಕೆ. ಅಣ್ಣಾಮಲೈ