Advertisement
ಈ ಬಾರಿ ಪುತ್ತೂರು ಕಂಬಳಕ್ಕೆ ಜನವರಿ ತಿಂಗಳಲ್ಲೇ ಅವಕಾಶ ಲಭಿಸಿದೆ. ಈ ನಿಟ್ಟನಲ್ಲಿ ಕಂಬಳ ಕರೆ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಜಯಕರ್ನಾಟಕದ ಮುಂದಾಳತ್ವದೊಂದಿಗೆ ಸಂಸ್ಥಾಪಕ ಎನ್. ಮುತ್ತಪ್ಪ ರೈ ಅವರ ಸಾರಥ್ಯದಲ್ಲಿ ನಡೆಯುವ ಕಂಬಳ ಕೂಟವು ಈ ಬಾರಿಯೂ ಅತ್ಯಂತ ಯಶಸ್ವಿಯಾಗಿ ನಡೆಯಲಿದೆ. ಈ ನಿಟ್ಟಿನಲ್ಲಿ ಕಂಬಳ ಸಮಿತಿ ಅನುಭವಿ ಪದಾಧಿಕಾರಿಗಳು, ಕಂಬಳಾಭಿಮಾನಿಗಳು ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
ರಾಜ್ಯದ ಮೈತ್ರಿ ಸರಕಾರ ರೈತರಿಗೆ ಪ್ರಾಧಾನ್ಯ ನೀಡುವ ಸರಕಾರ. ಜ. 19ರಂದು ಮುಖ್ಯಮಂತ್ರಿಗಳು ಮಂಗಳೂರಿಗೆ ಆಗಮಿಸುವ ಕಾರ್ಯಕ್ರಮವಿದೆ. ಇದರ ಜತೆಗೆ ಕಡಬ, ಮೂಡುಬಿದಿರೆ ತಾಲೂಕುಗಳಿಗೆ ಚಾಲನೆ ನೀಡುವ ಸಾಧ್ಯತೆಯೂ ಇದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸಹಿತ ವಿಐಪಿಗಳನ್ನು ಆಹ್ವಾನಿಸುತ್ತೇವೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸ್ಪೀಕರ್ ಪ್ರತಾಪ್‌ಚಂದ್ರ, ಸಚಿವೆ ಜಯಮಾಲಾ ಅವರನ್ನು ಆಹ್ವಾನಿಸಲಾಗಿದ್ದು, ಚಿತ್ರನಟ, ನಟಿಯರು ಪಾಲ್ಗೊಳ್ಳುವರು ಎಂದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಕೋಟಿ -ಚೆನ್ನಯ ಕಂಬಳ ಸಮಿತಿ ಸಂಚಾಲಕ ಎನ್. ಸುಧಾಕರ ಶೆಟ್ಟಿ, ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಪಿ.ವಿ., ಕೋಶಾಧಿಕಾರಿ ಪ್ರಸನ್ನ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ನಿರಂಜನ್ ರೈ ಮಠಂತಬೆಟ್ಟು, ಎಲಿಕ ಜಯರಾಜ್, ಜತೆ ಕಾರ್ಯದರ್ಶಿ ಪ್ರೇಮಾನಂದ ನಾೖಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪ್ರಮುಖರಾದ ಶಶಿಕಿರಣ್ ರೈ, ಮುರಳೀಧರ ರೈ ಮಠಂತಬೆಟ್ಟು, ಶ್ರೀರಾಂ ಪಕ್ಕಳ, ಜಯಪ್ರಕಾಶ್ ನೂಜಿಬೈಲು, ಪ್ರವೀಣ್‌ಚಂದ್ರ ಆಳ್ವ, ಇಸಾಕ್ ಸಾಲ್ಮರ, ರೋಶನ್ ರೈ, ಹಸೈನಾರ್ ಬನಾರಿ, ಶಿವರಾಮ ಆಳ್ವ, ನವೀನ್‌ಚಂದ್ರ ನಾೖಕ್, ಪ್ರವೀಣ್ ನಾೖಕ್, ನೇಮಾಕ್ಷ ಸುವರ್ಣ, ಮಹಾಬಲ ರೈ ಉಪಸ್ಥಿತರಿದ್ದರು. ಕೃಷ್ಣ ಪ್ರಸಾದ್ ಆಳ್ವ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
Related Articles
ಕಂಬಳ ಕೋಣಗಳ ಮೂಲಕ ಕಂಬಳ ಕೂಟಕ್ಕೆ ಹುರುಪನ್ನು ತುಂಬುತ್ತಿದ್ದು, ಇತ್ತೀಚೆಗೆ ನಿಧನ ಹೊಂದಿದ ವಿನು ವಿಶ್ವನಾಥ ಶೆಟ್ಟಿ ಅವರಿಗೆ ಪುತ್ತೂರು ಕಂಬಳ ಸಮಿತಿ ವತಿಯಿಂದ ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Advertisement