Advertisement

ಪುತ್ತೂರು-ಉಪ್ಪಿನಂಗಡಿ: ಹದಗೆಟ್ಟ ರಸ್ತೆಗೆ ತೇಪೆ

10:20 PM Oct 30, 2019 | Team Udayavani |

ಪುತ್ತೂರು: ಪುತ್ತೂರು- ಉಪ್ಪಿನಂಗಡಿ ರಸ್ತೆಯಲ್ಲಿನ ಅಭಿವೃದ್ಧಿಗೊಳ್ಳದೆ ಉಳಿದಿರುವ ಭಾಗದ ರಸ್ತೆಗಳು ತೀವ್ರ ಹದಗೆಟ್ಟಿದ್ದು, ಸದ್ಯಕ್ಕೆ ತಾತ್ಕಾಲಿಕ ತೇಪೆ ಕಾರ್ಯವನ್ನು ಮುಂದುವರಿಸಲಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಹಾಗೂ ಪುತ್ತೂರು ನಗರಕ್ಕೆ ಉಪ್ಪಿನಂಗಡಿ ಮೂಲಕ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಪುತ್ತೂರಿನಿಂದ ಕೃಷ್ಣನಗರ ತನಕ ಚತುಷ್ಪಥಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಉಳಿದ ಭಾಗದ ಅಭಿವೃದ್ಧಿಗೆ ಪುತ್ತೂರು ಶಾಸಕರ ಮುತುವರ್ಜಿ ಮೇರೆಗೆ 12 ಕೋಟಿ ರೂ. ಅನುದಾನ ಮಂಜೂರಾತಿ ಆಗಿದೆ. ಆದರೆ ಮುಂದಿನ ಪ್ರಕ್ರಿಯೆಗಳು ನಿಧಾನಗತಿಯಲ್ಲಿರುವ ಕಾರಣ ಸಂಚಾರ ಸಮಸ್ಯೆಯೂ ಉಲ್ಬಣಗೊಂಡಿದೆ.

ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಮಳೆಗಾಲದಲ್ಲಿ ದೊಡ್ಡ ಹೊಂಡಗಳು ಕಾಣಿಸಿಕೊಂಡ ಕಾರಣ ಜನರ ಅಕ್ರೋಶ ವ್ಯಕ್ತವಾಗಿ ಒಂದಷ್ಟು ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಲಾಗಿತ್ತು. ಆದರೆ ಅದೂ ಈಗ ಉಳಿದುಕೊಂಡಿಲ್ಲ. ಹೊಸ ರಸ್ತೆ ಆಗುವ ತನಕ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಮತ್ತೆ ಜಲ್ಲಿ ಹಾಕಿ ಸರಿಪಡಿಸುವ ಕಾಮಗಾರಿ ನಡೆಸಲಾಗುತ್ತಿದೆ.

ಮುಂದೂಡಿಕೆ
ಪುತ್ತೂರು – ಉಪ್ಪಿನಂಗಡಿ ರಸ್ತೆಯನ್ನು ಸಂಪೂರ್ಣ ಸುಸಜ್ಜಿತಗೊಳಿಸಿ ಚತುಷ್ಪಥ ಮಾಡಲು ಶಾಸಕರೂ ವಿಶೇಷ ಆಸಕ್ತಿ ವಹಿಸಿದ್ದಾರೆ. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲೂ ಕೂಡಲೇ ಕಾಮಗಾರಿ ಆರಂಭಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದರು. ಆದರೆ ಟೆಂಡರ್‌ ಪ್ರಕ್ರಿಯೆ ಹಂತದಲ್ಲಿರುವುದರಿಂದ ಕೆಲವು ದಿನಗಳ ಕಾಲ ಮುಂದೂಡಿಕೆಯಾಗಿದೆ.

ಟೆಂಡರ್‌ ಪ್ರಗತಿಯಲ್ಲಿ…
ಪುತ್ತೂರು -ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೆ ಮಂಜೂರಾದ ಅನುದಾನದ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಒಂದೆರಡು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣ ಗೊಳ್ಳಲಿದೆ. ತ್ವರಿತ ಕಾಮಗಾರಿಗೆ ಶಾಸಕರೂ ಸೂಚನೆ ನೀಡಿ ದ್ದಾರೆ.
– ಪ್ರಮೋದ್‌ ಕುಮಾರ್‌ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next