Advertisement

ತೈಲಪಾತ್ರೆಯಿಂದ ಧ್ವಜಮರ ಹೊರಕ್ಕೆ: ಮುಹೂರ್ತ

06:40 AM Feb 18, 2019 | Team Udayavani |

ಪುತ್ತೂರು: ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭವನ್ನು ಫೆ. 17ರಂದು ತೈಲಪಾತ್ರೆಯಿಂದ ಹೊರತೆಗೆಯುವ ಕಾರ್ಯಕ್ಕೆ
ಮುಹೂರ್ತ ನೆರವೇರಿಸಲಾಯಿತು.

Advertisement

ದೇವಸ್ಥಾನದ ಆವರಣದಲ್ಲೇ ತೈಲ ಪಾತ್ರೆಯನ್ನು ನಿರ್ಮಿಸಿ, ಅದರಲ್ಲಿ ಧ್ವಜ ಮರವನ್ನು ಇಡಲಾಗಿತ್ತು. ಕಳೆದ 58 ದಿನಗಳಿಂದ ತೈಲಪಾತ್ರೆಯಲ್ಲಿದ್ದ ಧ್ವಜಮರದ ಎಣ್ಣೆಯನ್ನು ತೆಗೆದು, ಧ್ವಜಮರವನ್ನು ಹೊರ ತೆಗೆಯಲಾಗುವುದು. ಫೆ. 20ರಿಂದ ಚಿನ್ನದ ಕವಚ ಹೊದಿಸುವ ಕಾರ್ಯ ಆರಂಭಗೊಳ್ಳಲಿದೆ.

ಅರ್ಚಕ ವಸಂತ ಕೆದಿಲಾಯ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ, ನಯನಾ ರೈ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next