Advertisement
ಜನಸಂದಣಿಸಂತೆ ಇಲ್ಲದಿದ್ದರೂ ಪುತ್ತೂರು ನಗರದಲ್ಲಿ ಸೋಮವಾರ ಜನರ ಓಡಾಟ ಹೆಚ್ಚಿದೆ. ಲಾಕ್‌ಡೌನ್‌ನ ಪ್ರಥಮ ಹಂತ ಹೊರತು ಪಡಿಸಿದರೆ ಉಳಿದ ಎರಡೂ ಲಾಕ್‌ಡೌನ್‌ಗಳ ಅವಧಿಯಲ್ಲಿಯೂ ನಗರದಲ್ಲಿ ಜನಸಂದಣಿ ಹೆಚ್ಚಿತ್ತು. ಗ್ರಾಮೀಣ ಜನರು ವಾರಕ್ಕೊಮ್ಮೆ ಪೇಟೆಗೆ ಬರುವ ರೂಢಿಯಿದ್ದು ಹೆಚ್ಚಾಗಿ ಸೋಮವಾರವೇ ಬರುತ್ತಾರೆ. ಇದರಿಂದ ಬಸ್ ಓಡಾಟ ಇಲ್ಲದಿದ್ದರೂ ಖಾಸಗಿ, ಬಾಡಿಗೆ ವಾಹನಗಳ ಓಡಾಟ ಅಧಿಕವಾಗಿತ್ತು.
ಸಂತೆಗೆ ತಂದು ಕೃಷಿ ಉತ್ಪನ್ನ ಮಾರಾಟ ಮಾಡುತ್ತಿದ್ದ ಗ್ರಾಮೀಣರು ಈಗ ಸಂತೆಯಿಲ್ಲದ್ದರಿಂದ ಅಂಗಡಿಗೆ ಕೊಡಬೇಕಾಗಿದೆ. ತರಕಾರಿ ಕೃಷಿ ನಡೆಸುವ ಕೃಷಿಕರಿಗೂ ಸಂತೆ ಹೆಚ್ಚು ಲಾಭದಾಯಕವಾಗಿತ್ತು. ಹೊರ ಜಿಲ್ಲೆಗಳಿಂದ ವ್ಯಾಪಾರಿಗಳು ಬರುವುದರಿಂದ ಗ್ರಾಹಕರಿಗೂ ಕಡಿಮೆ ದರದಲ್ಲಿ ತರಕಾರಿ ಮತ್ತಿತರ ವಸ್ತುಗಳನ್ನು ಖರೀದಿಸಲು ಅನುಕೂಲವಾಗುತ್ತಿತ್ತು. ಎಪಿಎಂಸಿ ಸಂತೆ ಸಫಲವಾಗಿಲ್ಲ
ಸಂತೆಗೆ ಪರ್ಯಾಯವಾಗಿ ಎಪಿಎಂಸಿ ಪ್ರಾಂಗಣದಲ್ಲಿ ರೈತ ಸಂತೆಗೆ ಪ್ರಯತ್ನ ನಡೆಸ ಲಾಯಿತಾದರೂ ರೈತರ ಸ್ಪಂದನೆ ಸಿಕ್ಕಿಲ್ಲ. ನಗರದಿಂದ ತುಸು ದೂರವಿರುವ ಎಪಿಎಂಸಿ ಪ್ರಾಂಗಣಕ್ಕೆ ಬರುವುದಕ್ಕೆ ರೈತರಿಗೆ ಸಮಸ್ಯೆಯಾದ ಕಾರಣ ವಿಫಲವಾಗಿದೆ.