Advertisement

ಪುತ್ತೂರು: ಜನಜಾಗೃತಿ ಸಮಾವೇಶ

03:41 PM Oct 04, 2017 | |

ಪುತ್ತೂರು: ಶ್ರೀ ಕ್ಷೇ.ಧ.ಗ್ರಾ., ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಪ್ರಗತಿಬಂಧು ಸ್ವ.ಸ. ಸಂಘಗಳ ಒಕ್ಕೂಟ ಪುತ್ತೂರು ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳವಾರ ಪುತ್ತೂರು ಪುರಭವನದಲ್ಲಿ ಜನಜಾಗೃತಿ ಸಮಾವೇಶ ಮತ್ತು ನವಜೀವನ ಸಮಿತಿ ಸದಸ್ಯರ ಅಭಿನಂದಿಸುವ ಸಮಾರಂಭ ನಡೆಯಿತು.

Advertisement

ಆಕರ್ಷಕ ಮೆರವಣಿಗೆ
ಸಮಾವೇಶಕ್ಕೆ ಮೊದಲು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಹೊರಟ ಜಾಗೃತಿ ಜಾಥಾ ವನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ಉದ್ಘಾಟಿಸಿದರು. ಅನಂತರ ಮುತ್ತೈದೆಯರ ಪೂರ್ಣಕುಂಭ, ಹುಲಿ ವೇಷ, ಬ್ಯಾಂಡ್‌ ಮೇಳ, ಭಜನೆ, ಜಾಗೃತಿ ಘೋಷಣೆಯೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು. ಗಾಂಧಿ ಕಟ್ಟೆಯಲ್ಲಿ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಮಾವೇಶವು ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿನಡೆಯಿತು. ಶಾಸಕಿ ಶಕುಂತಳಾ ಟಿ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ಅಧ್ಯಕ್ಷ ಸತೀಶ್‌ ಹೊನ್ನವಳ್ಳಿ ಶುಭ ಹಾರೈಸಿದರು.

ಸರಕಾರಕ್ಕೆ ಹಕ್ಕೊತ್ತಾಯ
ಮದ್ಯಮುಕ್ತ ಚುನಾವಣೆ, ಮದ್ಯ ಪಾನಮುಕ್ತ ರಾಜ್ಯ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಮಾಡುವಂತೆ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ನಿರ್ದೇಶಕ ವಿವೇಕ್‌ ವಿನ್ಸೆಂಟ್‌ ಪಾಯಸ್‌ ಹಾಗೂ ಜ.ಜಾ.
ವೇದಿಕೆ ಪುತ್ತೂರು ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಮೂಲಕ
ಸರಕಾರಕ್ಕೆ ಮನವಿ ಸಲ್ಲಿಸಿದರು.

ಗೌರವಾರ್ಪಣೆ
50ನೇ ಪಟ್ಟಾಭಿಷೇಕ ವರ್ಷ ಸಂಭ್ರಮಾಚರಣೆಯಲ್ಲಿರುವ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಧ. ಗ್ರಾ. ಯೋ.ಯ ವಿವಿಧ ಸಮಿತಿಗಳು, ವಿಭಾಗಗಳ ವತಿಯಿಂದ,ತಾ.ಪಂ., ನಗರಸಭೆ, ಪುಡಾ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ನೇತೃತ್ವದಲ್ಲಿ, ಸಂಘ ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು. ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್‌ ವಿನ್ಸೆಂಟ್‌ ಪಾಯಸ್‌, ಧ. ಗ್ರಾ.ಯೋಜನೆ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ, ಜ.ಜಾ. ವೇ. ರಾಜ್ಯ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೌಶಲ್‌ ಪ್ರಸಾದ್‌ ಶೆಟ್ಟಿ,ಪ್ರಮುಖರಾದ ಅರುಣ್‌ ಕುಮಾರ್‌ ಪುತ್ತಿಲ, ಶಶಿಕುಮಾರ್‌ ರೈ ಬಾಬಲ್ಯೊಟ್ಟು, ಸೀತಾರಾಮ ಗೌಡ ಪೊಸವಳಿಕೆ, ಕೈಲಾರ್‌ ರಾಜಗೋಪಾಲ್‌ ಭಟ್‌, ರಾಮಣ್ಣ ಗೌಡ, ನಾರಾಯಣ ರೈ ಕುಡ್ಕಾಡಿ, ರಾಕೇಶ್‌ ರೈ ಕೆಂಡೆಂಜಿ, ಪ್ರಶಾಂತ್‌ ಮುರ, ಅಬ್ದುಲ್‌ ಖಾದರ್‌ ಮೇರ್ಲ, ಸ್ವರ್ಣಲತಾ ಹೆಗ್ಡೆ, ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ, ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿ, ತಾ| ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ ಮೊದಲಾದವರು ಪಾಲ್ಗೊಂಡರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಸದಸ್ಯರಿಗೆ ಗೌರವ  ಕಾರ್ಯಕ್ರಮದಲ್ಲಿ ತಾಲೂಕಿನ 9 ವಲಯಗಳ 9 ಮಂದಿ ನವಜೀವನ ಸಮಿತಿ ಸದಸ್ಯರನ್ನು
ಸಾಂಕೇತಿಕವಾಗಿ ಅಭಿನಂದಿಸಲಾಯಿತು. ನವಜೀವನ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಮದ್ಯವ್ಯಸನ ಬಿಟ್ಟು ನವಜೀವನ ನಡೆಸುತ್ತಿರುವವರು ಅಭಿಪ್ರಾಯ ಹಂಚಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next