Advertisement
ಕೊಠಡಿ ಶಿಥಿಲತೆ, ಅಪಾಯಕಾರಿ ಮರಗಳಿರುವ ಸಮಸ್ಯೆಗಳ ಮಧ್ಯೆ ಶಾಲಾ ಆವರಣದಲ್ಲಿ ಹಾದು ಹೋಗಿರುವ ಹೈ- ಟೆನ್ಶನ್ ವಿದ್ಯುತ್ ತಂತಿಯ ಅಪಾಯದ ಕುರಿತು ಶಿಕ್ಷಣ ಇಲಾಖೆ ಕೂಡಲೆ ಮೆಸ್ಕಾಂ ಗಮನಕ್ಕೆ ತರಬೇಕಿದೆ. ಜತೆಗೆ ಮೆಸ್ಕಾಂ ಸಹ ಕೂಡಲೇ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದಿದ್ದರೆ ಈ ವರ್ಷವನ್ನೂ ವಿದ್ಯಾರ್ಥಿಗಳು ಆತಂಕದಿಂದಲೇ ಕಳೆಯುವಂತಾಗಲಿದೆ.
ಒಟ್ಟು 10 ಶಾಲೆಗಳ ಆವರಣದಲ್ಲಿ ಹೈ ಟೆನ್ಶನ್ ತಂತಿ ಹಾದು ಹೋಗಿದೆ. ಶಾಲಾ ಮಕ್ಕಳು ಸಂಚರಿಸುವ ಸ್ಥಳ ಇದಾಗಿದೆ. ತಂತಿ ಸ್ಥಳಾಂತರಿಸದಿದ್ದರೆ ಅಪಾಯ ಸಂಭವಿಸಿದರೆ ಎಂಬ ಆತಂಕ ವಿದ್ಯಾರ್ಥಿಗಳ ಪೋಷಕರದ್ದು. ವಾಳ್ಯ, ಕುಟ್ರಾಪ್ಪಾಡಿ ಶಾಲೆಯ ಕಟ್ಟಡ ದಿಂದ 10 ಮೀ., ಬಲ್ಯ ಶಾಲೆಯಿಂದ 20 ಮೀ., ಮುಕ್ವೆ ಶಾಲೆಯಲ್ಲಿ 40 ಮೀ. ದೂರ ದಲ್ಲಿ ಹೈ ಟೆನ್ಶನ್ ತಂತಿ ಹಾದು ಹೋಗಿದ್ದರೆ, ಉಳಿದ ಹಲವು ಶಾಲೆಗಳಲ್ಲಿ 50 ಮೀ. ವ್ಯಾಪ್ತಿಯೊಳಗೆ ಹಾದು ಹೋಗಿದೆ. ಮಳೆ, ಸಿಡಿಲಿಗೆ ಆತಂಕ
ಜೂನ್ ತಿಂಗಳು ಸಹಜವಾಗಿ ಮಳೆಗಾಲದ ಸಮಯ. ಈ ವೇಳೆ ಮಿಂಚು, ಗುಡುಗು, ಗಾಳಿ ಸಹಿತ ಮಳೆ ಸುರಿಯುತ್ತದೆ. ವಿದ್ಯುತ್ ತಂತಿ ಹಾದು ಹೋಗಿರುವ ಸ್ಥಳಗಳಲ್ಲಿ ಸಿಡಿಲಿನ ಆಘಾತದ ಆತಂಕ ಹೆಚ್ಚು. ಪ್ರಾಥಮಿಕ ಶಾಲಾ ಮಕ್ಕಳಿಗೆ ಅಪಾಯದ ಬಗ್ಗೆ ತಿಳಿವಳಿಕೆ ಕಡಿಮೆ ಇರುವ ಕಾರಣ ವಿದ್ಯುತ್ ತಂತಿ ಕೆಳಭಾಗದಲ್ಲಿ ಓಡಾಡುವಾಗ ಅಪಾಯ ಸಂಭವಿಸಿದರೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
Related Articles
ಆಯಾ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಲಾವಾರು ನೀಡಲಾದ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳು ಜಿ.ಪಂ.ಗೆ ಸಲ್ಲಿಸಿವೆ. ಇದರಲ್ಲಿ ಶಾಲಾ ಆವರಣದಲ್ಲಿ ಹಾದು ಹೋಗಿರುವ ಹೈ-ಟೆನ್ಶನ್ ತಂತಿಯ ಬಗ್ಗೆಯೂ ಉಲ್ಲೇಖಿಸಲಾಗಿದೆ.
Advertisement
ಈಗಾಗಲೇ ಅರಿಯಡ್ಕ ಶಾಲಾ ಆವರಣದಲ್ಲಿನ ವಿದ್ಯುತ್ ತಂತಿ ಸ್ಥಳಾಂತರದ ಬಗ್ಗೆ ಮೆಸ್ಕಾಂ ಗಮನಕ್ಕೆ ತರಲಾಗಿದೆ. ನಿಡ³ಳ್ಳಿ ಶಾಲೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಅನುದಾನದ ಕೊರತೆ ಇದೆ. ಗಂಡಿಬಾಗಿಲು ಶಾಲಾ ವಠಾರದಲ್ಲಿ ಮಕ್ಕಳು ಹೋಗದಂತೆ ಎಚ್ಚರಿಸಲಾಗಿದೆ. ಕಳಾರ ಶಾಲಾ ವಠಾರದ ವಿದ್ಯುತ್ ತಂತಿಯ ಬಗ್ಗೆ ಮೆಸ್ಕಾಂ ಪರಿಶೀಲನೆ ನಡೆಸಿದೆ ಎಂದು ಆಯಾ ಶಾಲೆಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿವೆ. ಜಿ.ಪಂ.ಈ ಅಂಶವನ್ನು ಮೆಸ್ಕಾಂ ಗಮನಕ್ಕೆ ತಂದು ಕೂಡಲೇ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕಿದೆ.
ಆವರಣದಲ್ಲಿ ತಂತಿ ಹಾದು ಹೋಗಿರುವ ಶಾಲೆಗಳು
1. ಸ.ಹಿ.ಪ್ರಾ.ಶಾಲೆ ಅರಿಯಡ್ಕ2. ಸ.ಹಿ.ಪ್ರಾ.ಶಾಲೆ ಮುಂಡೂರು-1
3. ಸ.ಉ.ಹಿ.ಪ್ರಾ.ಶಾಲೆ ಗಂಡಿಬಾಗಿಲು,
4. ಸ.ಉ.ಹಿ.ಪ್ರಾ.ಶಾಲೆ ನೇರ್ಲ
5. ಸ.ಹಿ.ಪ್ರಾ.ಶಾಲೆ ಕಳಾರ
6. ಸ.ಹಿ.ಪ್ರಾ.ಶಾಲೆ ಬಲ್ಯ
7. ಸ.ಹಿ.ಪ್ರಾ.ಶಾಲೆ ಕುಂಜೂರು ಪಂಜ
8. ಸ.ಹಿ.ಪ್ರಾ.ಶಾಲೆ ಮುಕ್ವೆ
9. ಸ.ಕಿ.ಪ್ರಾ ಶಾಲೆ ವಾಳ್ಯ
10. ಸ.ಹಿ.ಪ್ರಾ ಶಾಲೆ, ಕುಟ್ರಾಪ್ಪಾಡಿ ಸರಕಾರಿ ಶಾಲೆಗಳ ಆವರಣದಲ್ಲಿ ಹೈ-ಟೆನ್ಶ್ ನ್ ತಂತಿ ಹಾದು ಹೋಗಿದ್ದರೆ ಮೆಸ್ಕಾಂ ಗಮನಕ್ಕೆ ತರಬೇಕು. ಇಲಾಖೆ ಅದರ ಸ್ಥಳಾಂತರಕ್ಕೆ ತತ್‌ಕ್ಷಣ ಕ್ರಮ ಕೈಗೊಳ್ಳಲಿದೆ. ಖಾಸಗಿ ಶಾಲೆಗಳ ಆವರಣವಾಗಿದ್ದರೆ ಖಾಸಗಿಯಾಗಿ ಅವರೇ ಮಾಡಿಸಿಕೊಳ್ಳಬೇಕು. ಕೆಲ ವರ್ಷಗಳ ಹಿಂದೆ ಹಲವು ಶಾಲೆಗಳ ಆವರಣದಲ್ಲಿನ ವಿದ್ಯುತ್ ತಂತಿ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದೇವೆ.
ರಾಮಚಂದ್ರ ಎ.,
ಕಾರ್ಯನಿರ್ವಾಹಕ ಎಂಜಿನಿಯರ್, ಮೆಸ್ಕಾಂ ಪುತ್ತೂರು ಶಾಲಾ ಆವರಣದಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವ ಶಾಲೆಗಳ ಪಟ್ಟಿ ಮಾಡಿ ಮೆಸ್ಕಾಂಗೆ ಕಳುಹಿಸಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದ ರೀತಿಯಲ್ಲಿ ಪ್ರತೀ ಶಾಲೆಗಳ ಮೇಲೆ ನಿಗಾ ಇರಿಸಲಾಗಿದೆ.
ಲೋಕೇಶ್ ಎಸ್.ಆರ್.,
ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು *ಕಿರಣ್ ಪ್ರಸಾದ್ ಕುಂಡಡ್ಕ