Advertisement
ಆರೋಪಿಯು ತನ್ನ ಅಣ್ಣ ಪೈವಳಿಕೆ ಕಳಾಯಿ ನಿವಾಸಿ ಪ್ರಭಾಕರ ನೊಂಡಾ (40) ಅವರನ್ನು ಇರಿದು ಹತ್ಯೆ ಮಾಡಿದ್ದ. ಬಳಿಕ ಅಲ್ಲಿಂದ ಪರಾರಿಯಾಗಿದ್ದು, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪುತ್ತೂರು ನಗರ ಠಾಣೆ ಪೊಳೀಸರು ಆರೋಪಿಗಾಗಿ ದೇವಸ್ಥಾನದ ಗದ್ದೆಯಲ್ಲಿ ಶೋಧಿಸಿದ್ದು, ಇದನ್ನು ಗಮನಿಸಿದ ಆರೋಪಿಯು ಓಡಿ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸ್ ಸಿಬಂದಿಗಳಾದ ಸ್ಕರಿಯ, ಉದಯ್, ಸುಬ್ರಹ್ಮಣ್ಯ ಮತ್ತು ಕಿರಣ್ ಅವರು ಆತನನ್ನು ಬೆನ್ನಟ್ಟಿ ಸೆರೆ ಹಿಡಿದಿದ್ದಾರೆ. Advertisement
ಅಣ್ಣನನ್ನು ಕೊಂದು ಪುತ್ತೂರಿನಲ್ಲಿ ಅಡಗಿಕೊಂಡಿದ್ದ ತಮ್ಮನ ಬಂಧನ
08:46 PM Jun 03, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.