Advertisement

Puttur: ನಗರಸಭಾ ಚುನಾವಣೆ; ಬಿಜೆಪಿಯ ರಮೇಶ್, ಕಾಂಗ್ರೆಸ್ ನ ದಿನೇಶ್ ಜಯಭೇರಿ

08:57 AM Dec 30, 2023 | Team Udayavani |

ಪುತ್ತೂರು: ನಗರಸಭಾ ತೆರವಾದ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ವಾರ್ಡ್ -11 ಬಿಜೆಪಿಯ ರಮೇಶ್ ರೈ ಹಾಗೂ ವಾರ್ಡ್-1ರಲ್ಲಿ ಕಾಂಗ್ರೆಸ್ ನ ದಿನೇಶ್ ಶೇವಿರೆ ಜಯಭೇರಿ ಭಾರಿಸಿದ್ದಾರೆ.

Advertisement

ವಾರ್ಡ್ 11 ರಲ್ಲಿ ಚಲಾವಣೆಯಾದ ಒಟ್ಟು 1053 ಮತಗಳಲ್ಲಿ ಬಿಜೆಪಿಯ ರಮೇಶ್ ರೈ 431, ಕಾಂಗ್ರೆಸ್ ನ ದಾಮೋದರ ಭಂಡಾರ್ ಕರ್ 400, ಪುತ್ತಿಲ ಪರಿವಾರದ ಚಿಂತನ್ 216 ಮತಗಳನ್ನು ಪಡೆದುಕೊಂಡಿದ್ದಾರೆ. 6 ಮತ ನೋಟಕ್ಕೆ ಚಲಾವಣೆಯಾಗಿದೆ. ಬಿಜೆಪಿ ರಮೇಶ್ ರೈ 31 ಮತಗಳ ಅಂತದಲ್ಲಿ ಜಯ ಗಳಿಸಿದ್ದಾರೆ.

ವಾರ್ಡ್ 1ರಲ್ಲಿ ಚಲಾವಣೆಯಾದ ಒಟ್ಟು 958 ಮತಗಳಲ್ಲಿ ಕಾಂಗ್ರೆಸ್ ನ ದಿನೇಶ್ ಶೇವಿರೆ 427, ಬಿಜೆಪಿಯ ಸುನೀತಾ 219 ಹಾಗೂ ಪುತ್ತಿಲ ಪರಿವಾರದ ಅನ್ನಪೂರ್ಣ 308 ಮತಗಳನ್ನು ಪಡೆದುಕೊಂಡಿದ್ದಾರೆ. 4 ಮತ ನೋಟಕ್ಕೆ ಚಲಾವಣೆಯಾಗಿದೆ.  ಕಾಂಗ್ರೆಸ್ ನ ದಿನೇಶ್ ಶೇವಿರೆ 119 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next