Advertisement

ಸುಸಜ್ಜಿತ ಸಂತೆ ಮಾರುಕಟ್ಟೆ  ನಿರ್ಮಾಣ ಶೀಘ್ರ

06:04 AM Feb 28, 2019 | |

ಸವಣೂರು: ಗ್ರಾಮೀಣ ಭಾಗದಲ್ಲಿ ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯ ಸ್ಥಳೀಯವಾಗಿಯೇ ದೊರೆಯಲಿ ಎನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಸವಣೂರಿನಲ್ಲಿ ಸುಸಜ್ಜಿತ ಸಂತೆ ಮಾರುಕಟ್ಟೆ ನಿರ್ಮಿಸ ಬೇಕೆಂದು ಸವಣೂರು ಗ್ರಾ.ಪಂ. ನೀಡಿದ ಮನವಿಗೆ ಪುತ್ತೂರು ಎಪಿಎಂಸಿ ಸ್ಪಂದಿಸಿದ್ದು, ತನ್ನ ಅನುದಾನದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಬಹುದೆಂದು ನಿರ್ಣಯ ಕೈಗೊಂಡಿದೆ.

Advertisement

ಈ ಮೂಲಕ ಸಂತೆ ಮಾರುಕಟ್ಟೆ ನಿರ್ಮಾಣದ ಆಶಾಭಾವನೆ ವ್ಯಕ್ತವಾಗಿದೆ. ಸವಣೂರಿನಲ್ಲಿ ಫೆ. 14ರಿಂದ ಪ್ರತೀ ಗುರುವಾರ ವಾರದ ಸಂತೆ ಆರಂಭ ಆಗಿದೆ. ಈ ನಿಟ್ಟಿನಲ್ಲಿ ಸಂತೆ ಮಾರುಕಟ್ಟೆ ನಿರ್ಮಾಣಟ ಹೊಸ ಸಾಧ್ಯತೆ ತೆರೆದಿಟ್ಟಿದೆ.

ಸವಣೂರಿನಲ್ಲಿ ಸಂತೆ ಆರಂಭವಾಗಬೇಕೆಂಬ 10 ವರ್ಷಗಳ ಬೇಡಿಕೆ ಈ ವರ್ಷ ಈಡೇರಿದೆ. ತಾಲೂಕಿನಲ್ಲಿ ನಡೆಯುವ ವಿವಿಧ ಸಂತೆಗಳಿಗೆ ತೆರಳಿ ಅಲ್ಲಿನ ವ್ಯಾಪಾರಿಗಳನ್ನು ಸಂಪರ್ಕಿಸಿ, ಸವಣೂರಿನಲ್ಲಿ ಪ್ರತೀ ಗುರುವಾರ ನಡೆಯುವ ಸಂತೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿತ್ತು. ಅದರಂತೆ ವಿವಿಧ ಭಾಗಗಳಿಂದ ವ್ಯಾಪಾರಸ್ಥರು ಆಗಮಿಸಿ, ಎರಡು ವಾರ ಸಂತೆ ಯಶಸ್ವಿಯಾಗಿ ನಡೆದಿದೆ. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸವಣೂರು ಕೇಂದ್ರ
ಹಲವು ಊರಿಗೆ ಸಂಪರ್ಕಿಸಲು ಜಂಕ್ಷನ್‌ ಆಗಿರುವ ಸವಣೂರಿನಲ್ಲಿ ಸಂತೆ ಆರಂಭವಾಗಿದ್ದರಿಂದ ಹಲವು ಕೃಷಿಕರಿಗೆ ವರದಾನವಾಗಿದೆ. ಸವಣೂರು ಸುತ್ತಮುತ್ತ ಹಲವರು ತರಕಾರಿ ಬೆಳೆಯುತ್ತಿದ್ದಾರೆ. ಅವರಿಗೆ ನೇರ ಮಾರುಕಟ್ಟೆ ದೊರೆತಿದೆ. ಗ್ರಾಹಕರಿಗೂ ತಾಜಾ ತರಕಾರಿ ಹಾಗೂ ಇತರ ವಸ್ತುಗಳು ಒಂದೇ ಸೂರಿನಡಿ ಸಿಗಲಿವೆ. ಸಂತೆ ಮಾರುಕಟ್ಟೆಯೂ ನಿರ್ಮಾಣವಾದಲ್ಲಿ ವ್ಯಾಪಾರಿಗಳಿಗೆ, ಗ್ರಾಹಕರಿಗೆ ಶಾಶ್ವತ ಸೂರು ಸಿಗಲಿದೆ. ಈಗ ಸಂತೆ ನಡೆಯುವ ಸ್ಥಳ ಪುದುಬೆಟ್ಟು ಜಿನ ಮಂದಿರಕ್ಕೆ ಒಳಪಟ್ಟಿದೆ. ಗ್ರಾ.ಪಂ. ನೀಡಿರುವ ಮನವಿಯಲ್ಲಿ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟ 12 ಸೆಂಟ್ಸ್‌ ಜಾಗದಲ್ಲಿ ಸಂತೆ ಮಾರುಕಟ್ಟೆ ನಿರ್ಮಾಣ ಮಾಡುವಂತೆ ಕೋರಿದ್ದಾರೆ. 

ನಿರ್ವಹಣೆ ಗ್ರಾ.ಪಂ.ಗೆ
ಕಾದಿರಿಸಿದ ಸ್ಥಳವನ್ನು ಕಂದಾಯ ಇಲಾಖೆ ಗ್ರಾ.ಪಂ. ಹೆಸರಿಗೆ ಮಾಡಿ, ಎಪಿಎಂಸಿಗೆ ಹಸ್ತಾಂತರಿಸಬೇಕು. ಕಟ್ಟಡ ನಿರ್ಮಿಸಿ, ಗ್ರಾ.ಪಂ.ಗೆ ನೀಡಿದ ಮೇಲೆ ಅವರೇ ನಿರ್ವಹಿಸಬೇಕು.
– ರಾಮಚಂದ್ರ , ಕಾರ್ಯದರ್ಶಿ,
ಎಪಿಎಂಸಿ, ಪುತ್ತೂರು

Advertisement

ಸಂತೆಯಲ್ಲಿ ಬಟ್ಟೆ ಚೀಲ
ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಲು ಗ್ರಾಹಕರಿಗೆ ಬಟ್ಟೆ ಕೈಚೀಲ ವಿತರಿಸುವ ಬಗ್ಗೆ ಚರ್ಚಿಸಲಾಗಿದೆ. ಗ್ರಾ.ಪಂ. ಮನವಿಗೆ ಎಪಿಎಂಸಿ ಸ್ಪಂದಿಸಿ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಸಮ್ಮತಿಸಿದೆ.
ಇಂದಿರಾ ಬಿ.ಕೆ., ಅಧ್ಯಕ್ಷರು
ಸವಣೂರು ಗ್ರಾ.ಪಂ.

ನಿರ್ಮಾಣಕ್ಕೆ ಬದ್ಧ
ಸವಣೂರು ಗ್ರಾ.ಪಂ.ನ ಮನವಿಯಂತೆ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡಲು ಎಪಿಎಂಸಿ ಬದ್ಧವಾಗಿದೆ. ಇದು ಸವಣೂರಿಗೂ ಕೊಡುಗೆಯಾಗಲಿದೆ.
– ದಿನೇಶ್‌ ಮೆದು,
ಅಧ್ಯಕ್ಷರು, ಎಪಿಎಂಸಿ, ಪುತ್ತೂರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next