Advertisement

Puttur; ನಿಂತಿದ್ದ ಗೂಡ್ಸ್‌ ಲಾರಿಗೆ ಕಾರು ಢಿಕ್ಕಿ; ಮಹಿಳೆ ಸಾವು

12:22 AM Mar 12, 2024 | Team Udayavani |

ಪುತ್ತೂರು : ಮರೀಲ್‌ನ ಕ್ಯಾಂಪ್ಕೋ ಚಾಕೊಲೇಟ್‌ ಫ್ಯಾಕ್ಟರಿ ಬಳಿ ಕಾರೊಂದು ರಸ್ತೆ ಬದಿ ನಿಲ್ಲಿಸಿದ್ದ ಗೂಡ್ಸ್‌ ಲಾರಿಗೆ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದು, ಓರ್ವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸಂಭವಿಸಿದೆ.

Advertisement

ಗುಲಾಬಿ (55) ಮೃತಪಟ್ಟವರು. ಅಪಘಾತದಲ್ಲಿ ಕೃಷ್ಣಪ್ಪ ನಾಯ್ಕ (60) ಗಂಭೀರ ಗಾಯಗೊಂಡಿದ್ದು, ರೋಹಿಣಿ (32), ಗನ್ಯ (2) ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಾಸರ ಗೋಡು ಜಿಲ್ಲೆಯ ಪೈವಳಿಕೆ ಗ್ರಾಮದ ಸುಳ್ಳಿಮಲೆಯ ಒಂದೇ ಕುಟುಂಬದ ನಿವಾಸಿಗಳು ಕಾರಿನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬಂದ ಬೈಕಿಗೆ ಸೈಡ್‌ ಕೋಡುವ ಸಂದರ್ಭ ಕಾರು ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆಯಿತು.

ಗಂಭೀರ ಗಾಯಗೊಂಡ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next