Advertisement

ಪುರಾತನ ದೇಗುಲಗಳ ಅಭಿವೃದ್ಧಿಯಾಗಲಿ: ಪುತ್ತಿಗೆ ಶ್ರೀ

03:30 AM Jul 04, 2017 | Team Udayavani |

ಕೋಟೇಶ್ವರ: ಪುರಾತನ ದೇಗುಲಗಳ ಅಭಿವೃದ್ಧಿಯಾಗಬೇಕು. ಆ ಮೂಲಕ ಸನಾತನ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು. ಅಮೆರಿಕದಲ್ಲಿ ನೆಲೆಸಿರುವ ಕಾಪುವಿನ ಡಾ| ಸೀತಾರಾಮ್‌ ಭಟ್‌ ದಂಪತಿ ಅಸೋಡು ಗ್ರಾಮ ದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿರುವ ಶ್ರೀ ಕುಮಾರ ಮಹಾಲಿಂಗೇಶ್ವರ ದೇವಸ್ಥಾನವು ಧ್ಯಾನಕೇಂದ್ರವಾಗಿ ಬೆಳಗಲಿ ಎಂದು ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

Advertisement

ಕೋಟೇಶ್ವರ ಸಮೀಪದ ಅಸೋಡಿನಲ್ಲಿ ಪುನಃ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವದೊಡನೆ ಜೀರ್ಣೋದ್ಧಾರಗೊಂಡ ಶ್ರೀ ಕುಮಾರ ಮಹಾಲಿಂಗೇಶ್ವರ ದೇಗುಲದಲ್ಲಿ ರವಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು ಕಾಪುವಿನ ದಂಡತೀರ್ಥದ ಮೂಲದವರಾದ ಡಾ| ಸೀತಾರಾಮ ಭಟ್‌ ಅವರು ಅಮೆರಿಕದಲ್ಲಿ ನೆಲೆಸಿದ್ದರೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಿ ಶ್ರಮಿಸುತ್ತಿರುವುದು ಗಮನೀಯ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ದೇಗುಲ ಜೋರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಂಡತೀರ್ಥ ಡಾ| ಸೀತಾರಾಮ್‌ ಭಟ್‌ ಅವರು ಮಾತನಾಡಿ, ಅಸೋಡು ಗ್ರಾಮಕ್ಕೂ ತಮಗೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ವಿಶ್ಲೇಷಿಸುವುದರೊಡನೆ ಇವೆಲ್ಲವೂ ಭಗವಂತನ ಪ್ರೇರಣೆಯಂತೆ ನಡೆದಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ‌ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅವರು ಮಾತನಾಡಿ, ಡಾ| ಸೀತಾರಾಮ್‌ ಭಟ್‌ ಅವರ ಭಗವತ್‌ ಭಕ್ತಿಯ ಸೇವಾ ಕೈಂಕರ್ಯವನ್ನು ಶ್ಲಾಘಿಸಿದರು. ಕಾಳಾವರ ಗ್ರಾ.ಪಂ. ಅಧ್ಯಕ್ಷ ವಿ. ರವಿರಾಜ್‌ ಶೆಟ್ಟಿ, ಬೆಂಕಿಕಾನ ನಂದಿಕೇಶ್ವರ ದೇವಸ್ಥಾನದ ಧರ್ಮದರ್ಶಿ ದಯಾನಂದ ಹೆಗ್ಡೆ, ಕಾಳಾವರ ಶ್ರೀ ಕಾಳಿಂಗ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರವಿರಾಜ್‌ ಶೆಟ್ಟಿ, ಧಾರ್ಮಿಕ ಮುಖಂಡ ಪ್ರೊ| ಎಂ.ಬಿ. ಪುರಾಣಿಕ್‌ ಮಂಗಳೂರು, ಪದ್ಮಜ ಎಸ್‌. ಭಟ್‌, ಡಾ| ಜಗದೀಶ್‌ ಭಟ್‌ ಆಗಮಿಸಿ ಮಾತನಾಡಿದರು.

ಡಾ| ಸೀತಾರಾಮ್‌ ಭಟ್‌ ಕಾಪು, ಪದ್ಮಜ ಎಸ್‌. ಭಟ್‌ ಅವರನ್ನು ಶ್ರೀಗಳು ಸಮ್ಮಾನಿಸಿದರು. ಎಂಜಿನಿಯರ್‌ ಲಕ್ಷ್ಮೀನಾರಾಯಣ ಉಪಾಧ್ಯ, ಕೃಷ್ಣ ಸೋಮಯಾಜಿ, ವೇ| ಮೂ| ಕಡಂದಲೆ ಕೃಷ್ಣ ಭಟ್‌ ಹಾಗೂ ಶ್ರೀನಿವಾಸ ಸಾಮಗ ಅವರನ್ನು ಸಮ್ಮಾನಿಸಲಾಯಿತು. ಸಮಿತಿಯ ಜತೆ ಕಾರ್ಯದರ್ಶಿ ಎ. ಶ್ರೀನಿವಾಸ ಸಾಮಗ ಸ್ವಾಗತಿಸಿದರು. ಧಾರ್ಮಿಕ ಮುಖಂಡ ಪ್ರೊ| ಎಂ.ಬಿ. ಪುರಾಣಿಕ್‌ ಪ್ರಸ್ತಾವನೆಗೈದರು. ನಾಗರಾಜ್‌ ರಾವ್‌ ಪಾಂಗಾಳ ಕಾರ್ಯಕ್ರಮ ನಿರೂಪಿಸಿದರು. ಡಾ| ಜಗದೀಶ ಭಟ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next