Advertisement
ಬೆಳಗ್ಗೆ ನಡೆದ ಕೋಟಿಗೀತಾ ಲೇಖನಯಜ್ಞ ದೀಕ್ಷಾ ಸಮಾರಂಭದ ಗೀತೋತ್ಸವದ ಉದ್ಘಾಟನೆಯನ್ನು ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನೆರವೇರಿಸಿ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಕೇವಲ ಪುಣ್ಯ ಗ್ರಂಥವಲ್ಲ,ಅದು ನಾವು ಎದುರಿಸುವ ಸಮಸ್ಯೆಗಳ ನಿವಾರಣೆಗೆ ಮಾರ್ಗೋಪಾಯ ಬೋಧಿಸುವ ಗ್ರಂಥ.ಗೀತೆಯಲ್ಲಿ ಹೇಳಿದಂತೆ ಜೀವನದಲ್ಲಿ ಅನುಸರಿಸಿದರೆ ಶ್ರೀಕೃಷ್ಣನಿಗೆ ಪ್ರಿಯವಾಗುತ್ತದೆ.ಆಧುನಿಕ ಕಾಲದ ಜಿಪಿಎಸ್ ಇದ್ದಂತೆ ಗೀತೆ ನಮ್ಮ ಜೀವನದಲ್ಲಿದ್ದರೆ ಅದು ಸದಾ ನಮಗೆ ಮಾರ್ಗದರ್ಶನ ತೋರುತ್ತದೆ.ಖಿನ್ನತೆ,ಮಾನಸಿಕ ಕ್ಷೋಭೆ ಮೊದಲಾದ ಮನೋವ್ಯಾಧಿಗಳು ದಿನೇದಿನೇ ಹೆಚ್ಚಾಗುತ್ತಿರುವ ಈ ಕಾಲ ಘಟ್ಟದಲ್ಲಿ ಗೀತೆಯೊಂದೇ ಅದಕ್ಕೆ ಸೂಕ್ತ ಪರಿಹಾರ.ಆದ್ದರಿಂದ ಭಕ್ತರು ಈ ಗೀತೋತ್ಸವದಲ್ಲಿ ಪಾಲ್ಗೊಂಡು ಗೀತೆ ಬರೆಯುವ ಮೂಲಕ ತಮ್ಮ ಬೌದ್ಧಿಕ ಸ್ತರವನ್ನು ವಿಸ್ತಾರ ಮಾಡಿಕೊಳ್ಳುವ ಮೂಲಕ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬಹುದು ಎಂದು ಆಶೀರ್ವಚನ ನೀಡಿದರು.
Related Articles
ಸಂಜೆ “ಆಚಾರ್ಯತ್ರಯರ ಚಿಂತನೆಯಲ್ಲಿ-ಭಗವದ್ಗೀತೆ’ ಕಾರ್ಯಕ್ರಮ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಾಧಿಪತಿ ಪ್ರೊ| ಶ್ರೀನಿವಾಸ ವರಖೇಡಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
Advertisement
“ಆಚಾರ್ಯ ಶಂಕರರ ಗೀತಾಚಿಂತನೆ’ ಬಗ್ಗೆ ಮೈಸೂರಿನ ಶ್ರೀಸುಧಾಮ ಸಂಸ್ಕೃತ ದಿನಪತ್ರಿಕೆಯ ಸಂಪಾದಕ ವಿ| ಎಚ್.ವಿ. ನಾಗರಾಜ ರಾವ್, “ಆಚಾರ್ಯ ರಾಮಾನುಜರ ಗೀತಾಚಿಂತನೆ’ ಬಗ್ಗೆ ಪರಾಂಕುಶಾಚಾರ್ಯ ವೈದಿಕ ಅಧ್ಯಯನ ಸಂಸ್ಥೆಯ ಸ್ಥಾಪಕನ್ಯಾಸಿ ಡಾ| ರಾಮಾನುಜನ್ ಸಿ. ಡ್ಯಾಕ್, “ಆಚಾರ್ಯ ಮಧ್ವರ ಗೀತಾಚಿಂತನೆ’ ಬಗ್ಗೆ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ವಿ| ವಿ. ಹರಿದಾಸ್ ಭಟ್ಟ ಅವರು ಚಿಂತನೆ ನಡೆಯಿತು. ಡಾ|ಬಿ.ಗೋಪಾಲಾಚಾರ್ಯ ನಿರೂಪಿಸಿದರು,ಮಹಿತೋಷ್ ಆಚಾರ್ಯ ಸ್ವಾಗತಿಸಿದರು,ಶ್ರೀಪಾದರ ಆಪ್ತ ಕಾರ್ಯದರ್ಶಿ ಎಂ.ಪ್ರಸನ್ನಾಚಾರ್ಯ ವಂದಿಸಿದರು.