ರಷ್ಯಾ: ನ್ಯಾಟೋ ಪಡೆಗಳು ರಷ್ಯಾ ಸೇನೆ ಜೊತೆ ನೇರವಾಗಿ ಕದನ ಅಥವಾ ಘರ್ಷಣೆಗೆ ಇಳಿದರೆ ಇದರಿಂದಾಗಿ “ಜಾಗತಿಕ ದುರಂತ” ಎದುರಿಸಬೇಕಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗಂಭೀರ ಎಚ್ಚರಿಕೆಯ ಸಂದೇಶ ರವಾನಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸನ್ನ ಬಾಲಚಂದ್ರ ವರಳೆ ಪ್ರಮಾಣವಚನ ಸ್ವೀಕಾರ
ಕಜಕ್ ಸ್ತಾನ್ ರಾಜಧಾನಿ ಅಸ್ತಾನಾದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪುಟಿನ್, ಯಾವುದೇ ಕಾರಣದಿಂದಾಗಲಿ ನ್ಯಾಟೋ ಪಡೆಗಳು ರಷ್ಯಾ ಸೇನೆ ಜೊತೆ ನೇರವಾಗಿ ಘರ್ಷಣೆಗೆ ಇಳಿದರೆ ಇದು ತುಂಬಾ ಅಪಾಯಕಾರಿ ಬೆಳವಣಿಗೆಗೆ ಕಾರಣವಾಗಲಿದೆ. ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂಬ ಭರವಸೆ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಉಕ್ರೇನ್ ತನ್ನ ನಾಲ್ಕು ಪ್ರದೇಶಗಳನ್ನು ರಷ್ಯಾ ಪಡೆಯಿಂದ ಪುನರ್ ವಶಕ್ಕೆ ಪಡೆದ ನಂತರ ತನ್ನ ಪ್ರದೇಶ ಉಳಿಸಿಕೊಳ್ಳಲು ಪರಮಾಣು ಶಸ್ತ್ರಾಸ್ತ್ರ ಬಳಕೆ ಮಾಡುವುದಾಗಿ ಪುಟಿನ್ ಎಚ್ಚರಿಸಿದ್ದರು. ಈ ಹೇಳಿಕೆಯನ್ನು ವಿಶ್ವ ಸಂಸ್ಥೆ ಸೇರಿದಂತೆ ಹಲವು ದೇಶಗಳು ಖಂಡಿಸಿದ್ದವು.
“ಒಂದು ವೇಳೆ ಉಕ್ರೇನ್ ಮೇಲೆ ಪರಮಾಣು ಶಸ್ತ್ರಾಸ್ತ್ರ ಅಥವಾ ರಾಸಾಯನಿಕ ಅಸ್ತ್ರ ಬಳಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಜಿ-7 ದೇಶಗಳು ತಿರುಗೇಟು ನೀಡಿದ್ದವು.