ಉಕ್ರೇನ್ ವಿರುದ್ಧ ರಷ್ಯಾ ಅಣುಬಾಂಬ್ ಪ್ರಯೋಗಿಸಿದರೆ ಆಗುವ ವಿಧ್ವಂಸಕಾರಿ ಸನ್ನಿವೇಶದಿಂದ ತನ್ನ ಕುಟುಂಬವನ್ನು ಪಾರು ಮಾಡಲು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ತಮ್ಮ ಕುಟುಂಬ ಸದಸ್ಯರನ್ನೆಲ್ಲಾ ಅಣುಬಾಂಬ್ ನಿರೋಧಕ ವಲಯಕ್ಕೆ ರವಾನಿಸಿದ್ದಾರೆ ಎಂದು ರಷ್ಯಾದ ಪ್ರಾಧ್ಯಾಪಕರೊಬ್ಬರು ಆರೋಪಿಸಿದ್ದಾರೆ.
ಪುಟಿನ್ ಮೇಲಿನ ಇವರ ಆರೋಪ ಇಷ್ಟಕ್ಕೇ ನಿಂತಿಲ್ಲ. ರಷ್ಯಾ ರಾಷ್ಟ್ರಾಧ್ಯಕ್ಷರಿಗೆ ಗುಪ್ತವಾದ ಅನೇಕ ಕಾಯಿಲೆಗಳಿವೆ ಎಂಬ ಮತ್ತೂಂದು ಬಾಂಬ್ ಸಿಡಿಸಿದ್ದಾರೆ!
ಸುದ್ದಿಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸರ್ಬಿಯಾದ ಅಲ್ಟಾಯಿ ಬೆಟ್ಟಗಳ ಶ್ರೇಣಿಯ ಬುಡದಲ್ಲಿ ಪರಮಾಣು ಬಾಂಬ್ ನಿರೋಧಕ ಐಶಾರಾಮಿ ವ್ಯವಸ್ಥೆಯೊಂದನ್ನು ಕಲ್ಪಿಸಲಾಗಿದೆ. ಅಲ್ಲಿಗೆ ತಮ್ಮ ಕುಟುಂಬ ಸದಸ್ಯರನ್ನು ಪುಟಿನ್ ರವಾನಿಸಿದ್ದಾರೆ.
ಇದನ್ನೂ ಓದಿ:ಫೇಸ್‌ಬುಕ್‌ನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲ ಪೋಸ್ಟ್: ಆರೋಪಿ ಬಂಧನ
ಇನ್ನು, ಪುಟಿನ್‌ರವರಿಗೆ ಗುಪ್ತವಾದ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿವೆ ಎಂದು ರಾಜಕೀಯ ವಿಷಯ ಬೋಧಿಸುವ ಪ್ರಾಧ್ಯಾಪಕರಾದ ವ್ಯಾಲೆರಿ ಸೊಲೊವೆಯ್ (61) ಹೇಳಿದ್ದಾರೆ. ಕೆಲವು ದಿನಗಳ ಹಿಂದೆಯೂ, ವ್ಯಾಲೆರಿ ಅವರು ಪುಟಿನ್‌ಗೆ ಗುಪ್ತ ಕಾಯಿಲೆಗಳಿವೆ ಎಂದು ಹೇಳಿಕೆ ನೀಡಿದ್ದರು.
ಹಾಗಾಗಿ, ಕಳೆದ ವಾರ ಅವರನ್ನು ರಷ್ಯಾದ ಅಧಿಕಾರಿಗಳು 7 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದರು.