Advertisement

ಜನಸಂಖ್ಯೆ ಕುಸಿತ ತಡೆಯಲು ಕ್ರಮ

12:20 PM Aug 19, 2022 | Team Udayavani |

ನವದೆಹಲಿ: ಕೊರೊನಾ ವೈರಸ್‌ ದಾಳಿ, ಉಕ್ರೇನ್‌ ಮೇಲಿನ ಯುದ್ಧದಿಂದ ರಷ್ಯಾದಲ್ಲಿ ಜನಸಂಖ್ಯೆ ತೀವ್ರವಾಗಿ ಇಳಿದಿದೆ. ಯುದ್ಧದಲ್ಲಿ 50,000ದಷ್ಟು ಯೋಧರು ಮೃತಪಟ್ಟಿದ್ದಾರೆ. ಇದನ್ನು ಸರಿಮಾಡಿಕೊಳ್ಳಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಒಂದು ಕ್ರಮವನ್ನು ಘೋಷಿಸಿದ್ದಾರೆ. ಅದೇನು ಗೊತ್ತಾ?

Advertisement

ಯಾವುದೇ ಹೆಣ್ಣುಮಗಳು 10 ಮಕ್ಕಳಿಗೆ ಜನ್ಮ ನೀಡಿದರೆ ಹಾಗೂ ಅವು ಬದುಕುಳಿದರೆ ತಕ್ಷಣ 13 ಲಕ್ಷ ರೂ. ಹಣವನ್ನು ನೀಡಲಾಗುತ್ತದೆ! ಇದು ಅಲ್ಲಿನ ಜನಸಂಖ್ಯೆ ಹೆಚ್ಚಿಸುವುದಕ್ಕೆ ತೀವ್ರ ಹತಾಶರಾಗಿ ಪುಟಿನ್‌ ಘೋಷಣೆ ಮಾಡಿರುವ ಕ್ರಮ. ಈ ಯೋಜನೆಗೆ ಅವರು “ಮದರ್‌ ಹೀರೋಯಿನ್‌’ ಎಂದು ಹೆಸರಿಟ್ಟಿದ್ದಾರೆ.

ಆದರೆ ಇದನ್ನು ಅಲ್ಲಿನ ರಾಜಕೀಯ ಮತ್ತು ಭದ್ರತಾ ತಜ್ಞ ಡಾ.ಜೆರೆಮಿ ಮ್ಯಾಥರ್ಸ್‌ ಟೀಕಿಸಿದ್ದಾರೆ. 10 ಮಕ್ಕಳನ್ನು ಹೆರಬೇಕು, 10ನೇ ಮಗುವಿಗೆ 1 ವರ್ಷ ತುಂಬಿದ ತಕ್ಷಣ 13 ಲಕ್ಷ ರೂ. ನೀಡಬೇಕು. ಆದರೆ ಈ ಹಣ ಬರಬೇಕಾದರೆ ಬಾಕಿ 9 ಮಕ್ಕಳು ಜೀವಂತವಿರಬೇಕು ಎಂಬ ಷರತ್ತೂ ಇದೆ. ಇಷ್ಟೆಲ್ಲದರ ನಡುವೆ ಈ ಹೆಣ್ಣುಮಕ್ಕಳು ತಮ್ಮ ಜೀವನ ನಿರ್ವಹಣೆಗೆ ಏನು ಮಾಡಬೇಕು? ಈ ಕಡಿಮೆ ಹಣದಲ್ಲಿ ಏನು ಸಾಧ್ಯ ಎಂಬ ಪ್ರಶ್ನೆಗಳನ್ನು ಜೆರೆಮಿ ಎತ್ತಿದ್ದಾರೆ. ಜತೆಗೆ, ಇದು ರಷ್ಯಾದಲ್ಲಿ ಮತ್ತಷ್ಟು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next