Advertisement

Puthige Swamiji; ಗೀತಾರ್ಥ ಚಿಂತನೆ 42: ಆನಂದಕ್ಕಾಗಿ ಕೆಲಸ, ಕೆಲಸದಲ್ಲಿ ಆನಂದ

05:29 PM Sep 22, 2024 | Team Udayavani |

ಹಸಿವು ಇರುವುದರಿಂದಲೇ ಜೀವಿಗಳ ಎಲ್ಲ ಪ್ರವೃತ್ತಿಗಳು ಬಂದಿವೆ. ನನಗೆ ಹಸಿವು ಇಲ್ಲ ಎಂದು ಶ್ರೀಕೃಷ್ಣ ಹೇಳುತ್ತಾನೆ. ಆದರೆ ಆತ ಕೆಲಸವನ್ನು ಇತರರಿಗಿಂತ ಜಾಸ್ತಿ ಮಾಡುತ್ತಾನೆ. ಆತನಿಗೆ ಏನೂ ಲಾಭವಿಲ್ಲ. ಆದರೂ ಕೆಲಸ ಮಾಡುತ್ತಾನೆ. ನಾವಾದರೂ ಮಾಡುವುದು ಹಸಿವು ಇಂಗಿಸಲು. ಆದರೆ ಕೆಲಸ ಜಾಸ್ತಿಯಾಗುವುದು ಹಸಿವನ್ನು ಇಂಗಿಸಿದ ಬಳಿಕವಲ್ಲ, ಮೊದಲೇ. ಗೀತೆಯಲ್ಲಿ ಫ‌ಲೋದ್ದೇಶದಿಂದ ಕೆಲಸ ಮಾಡಬಾರದು ಎಂದು ಹೇಳಿರುವುದು ಏಕೆಂದರೆ ಭಗವಂತನ ಕಾರ್ಯಶೈಲಿಯನುಸಾರ.

Advertisement

ಹಸಿವು ಇಂಗಿಸಲು ಕೆಲಸ ಮಾಡದೆ ಆನಂದಾನುಭವಕ್ಕೆ ಕೆಲಸ ಮಾಡಬೇಕು ಎನ್ನುವುದು ನೀತಿ. ಭಗವಂತ ಕೆಲಸ ಮಾಡುವುದು ಆನಂದೋದ್ರೇಕಕ್ಕಾಗಿ. ಅದು ಆನಂದಾತ್ಮಕವಾದ ಕರ್ಮ. ಕಬಡ್ಡಿ, ಕ್ರಿಕೆಟ್‌ ಆಟವಾಡುತ್ತಾರೆ. ಏತಕ್ಕಾಗಿ? ಆಟವಾಡಿದರೆ ಕಷ್ಟವಾಗುವುದಿಲ್ಲವೆ? ಆದರೂ ಓಡಿಬರುತ್ತಾರಲ್ಲ? ಹಾಗೆ ಬರಲು ಕಾರಣ ಅದರಿಂದ ಸಿಗುವ ಆನಂದ. ಹೀಗಾಗಿ ಭಗವಂತನ ಎಲ್ಲ ಕೆಲಸವೂ ಆನಂದದ ಅಭಿವ್ಯಕ್ತಿ ಪ್ರತೀಕ. ಯಾವುದು ಆನಂದಾತ್ಮಕವಾಗಿರುವುದಿಲ್ಲವೋ ಅದು ಸಾರ್ಥಕವಲ್ಲ. ಸಂತೋಷವಾದಾಗ ಕಷ್ಟಪಟ್ಟರೂ ಕುಣಿಯುವುದಿಲ್ಲವೆ? ಸಂತೋಷವಾದಾಗ ಸುಮ್ಮನೆ ಕುಳಿತುಕೊಳ್ಳಿ ಎಂದರೂ ಕೇಳುವುದಿಲ್ಲ. ಇದು ಸಂತೋಷದ ಅಭಿವ್ಯಕ್ತಿ. ಕ್ರಿಯೆಯಲ್ಲಿ ಎರಡು ಬಗೆ ಆನಂದರೂಪವಾದುದು, ಆನಂದರೂಪವಲ್ಲದ್ದು. ನಮ್ಮ ಕರ್ಮ ಆನಂದರೂಪವಾಗಿರಬೇಕು.

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

 

Advertisement
Advertisement

Udayavani is now on Telegram. Click here to join our channel and stay updated with the latest news.

Next