ಡೆಹ್ರಾಡೂನ್: ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಬಿಜೆಪಿಯ ಪುಷ್ಕರ್ ಸಿಂಗ್ ಧಾಮಿ ಬುಧವಾರ ಡೆಹ್ರಾಡೂನ್‌ನ ಪರೇಡ್ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಎಂಟೇ ತಿಂಗಳುಗಳಲ್ಲಿ ಧಾಮಿ ಅವರು ಎರಡನೇ ಬಾರಿಗೆ ಸಿಎಂ ಪಟ್ಟಕ್ಕೇರಿರುವ ಧಾಮಿ ಅವರಿಗೆ ರಾಜ್ಯಪಾಲ, ನಿವೃತ್ತ ಲೆ| ಜ| ಗುರ್ಮೀತ್ ಸಿಂಗ್ ಪ್ರಮಾಣ ವಚನ ಬೋಧಿಸಿದ್ದಾರೆ.
ಧಾಮಿ ಜತೆ 8 ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಲ್ಲಿ ಐವರು ಧಾಮಿ ಅವರ ಈ ಹಿಂದಿನ ಸರಕಾರದಲ್ಲಿದ್ದವರಾದರೆ, ಇನ್ನು 3 ಹೊಸ ಮುಖಗಳಿಗೆ ಸಚಿವ ಪಟ್ಟ ಕೊಡಲಾಗಿದೆ. ಧಾಮಿ ಅವರು ಉತ್ತರಾಖಂಡದಲ್ಲಿ ಬಿಜೆಪಿಗೆ ಬಹುಮತ ಬರುವಂತೆ ಮಾಡುವಲ್ಲಿ ಯಶಸ್ವಿಯಾದ ರಾದರೂ ತಾವು ಸ್ಪರ್ಧಿಸಿದ್ದ ಖಾತಿಮಾ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಆದರೂ ಧಾಮಿ ಅವರಿಗೆ ಪಕ್ಷ 2ನೇ ಅವಕಾಶ ಕೊಟ್ಟಿದೆ. ಧಾಮಿ ಅವರು ಸಿಎಂ ಆಗಿ ಮುಂದುವರಿಯಲು 6 ತಿಂಗಳುಗ ಳಲ್ಲಿ ವಿಧಾನಸಭೆಗೆ ಆಯ್ಕೆಯಾಗಬೇಕು.
ಇದನ್ನೂ ಓದಿ:ತೆಲಂಗಾಣದಲ್ಲಿ ಕುಂದಾಪುರದ ವಿದ್ಯಾರ್ಥಿ ಸಾವು : ಪುತ್ರ ಶೋಕದಿಂದ ಮರುಗುತ್ತಿರುವ ದಂಪತಿಗಳು
ಇಂದು ಸಭೆ: ಉ.ಪ್ರ.ದಲ್ಲಿ ಆಯ್ಕೆಯಾ ಗಿರುವ ಬಿಜೆಪಿ ಶಾಸಕರು ಗುರುವಾರ ಸಭೆ ಸೇರಿ ಯೋಗಿ ಆದಿತ್ಯನಾಥ್‌ರನ್ನು ಶಾಸಕಾಂ ಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಿದ್ದಾರೆ. ಮಾ. 25ರಂದು ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಿರಿಯ ಶಾಸಕ ರಮಾಪತಿ ಶಾಸ್ತ್ರಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ.
ಪ್ರಧಾನಿ ಶುಭಹಾರೈಕೆ
ಧಾಮಿ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸಿದ್ದರು. ನೂತನ ಸಿಎಂ ಪ್ರಧಾನಿ ಶುಭ ಕೋರಿದ್ದಾರೆ.