Advertisement
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆ ಆವರಣದಲ್ಲಿ ನಿರ್ಮಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಕರ್ನಾಟಕದ ಅತಿ ಎತ್ತರದ 50 ಅಡಿ ಪ್ರತಿಮೆ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಈಗ ಎಂಇಎಸ್ ಎಂಟ್ರಿ ಆಗಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಶಿವಾಜಿ ಮಹಾರಾಜರ ಮೂರ್ತಿ ಬಳಸಿಕೊಂಡು ವೋಟು ಗಳಿಸುವ ಹುನ್ನಾರ ಇದರಲ್ಲಿ ಅಡಗಿದ್ದು, ಮತ ಗಳಿಕೆ ಲೆಕ್ಕಾಚಾರದಲ್ಲಿ ಮೂರೂ ಪಕ್ಷಗಳು ತೊಡಗಿಕೊಂಡಿವೆ. ಈಗ ಎಂಇಎಸ್ ಮಾ. 19ರಂದು ರಾಜಹಂಸಗಡದಲ್ಲಿ ಮೂರ್ತಿ ಶುದ್ಧೀಕರಣ ಮಾಡುತ್ತಿದೆ.
Related Articles
Advertisement
ಮರಾಠಿಗರ ಓಲೈಕೆಗೆ ಕಸರತ್ತು: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಮೂಲಕ ಈ ಮತ ಸೆಳೆಯುವ ತಂತ್ರ ಬಿಜೆಪಿ-ಕಾಂಗ್ರೆಸ್ ಹಾಗೂ ಎಂಇಎಸ್ ಲೆಕ್ಕಾಚಾರ ನಡೆಸಿವೆ. ಈ ನಿಟ್ಟಿನಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ ಬರುವ ಈ ಕೋಟೆ ನಿರ್ಮಾಣದ ಹೊಣೆ ಹೊತ್ತುಕೊಂಡು ಹೆಬ್ಟಾಳಕರ ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಿಸಿದ್ದಾರೆ. ಇಡೀ ಕೋಟೆಯ ಜೀರ್ಣೋದ್ಧಾರ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ತಂದಿದ್ದಾರೆ. ಇದೆಲ್ಲದರ ಶ್ರೇಯಸ್ಸು ತಮಗೇ ಹೋಗಬೇಕೆಂಬ ಉದ್ದೇಶದಿಂದ ಹೆಬ್ಟಾಳಕರ ಅಪಾರ ಜನಸ್ತೋಮ ಸೇರಿಸಿ ಪ್ರತಿಮೆ ಲೋಕಾರ್ಪಣೆಗೊಳಿಸಿದ್ದಾರೆ.
ಹೆಬ್ಬಾಳಕರ ಬದ್ಧ ವೈರಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಸರ್ಕಾರದ ಶಿಷ್ಟಾಚಾರ ಪ್ರಕಾರವೇ ಮೂರ್ತಿ ಲೋಕಾರ್ಪಣೆಗೆ ಸಿದ್ಧತೆ ಮಾಡಿಕೊಂಡು ಸಿಎಂ ಬೊಮ್ಮಾಯಿ ಮನವೊಲಿಸಿ ಕರೆಸುವ ಮೂಲಕ ಹಠ ಸಾ ಧಿಸಿದರು. ಹೆಬ್ಟಾಳಕರ ಅವರೂ ಶಿವಾಜಿ ಮಹಾರಾಜರ ವಂಶಸ್ಥ ಸಂಭಾಜಿ ರಾಜೇ ಭೋಸಲೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರಾದ ಸತೇಜ್(ಬಂಟಿ) ಪಾಟೀಲಹಾಗೂ ಧೀರಜ್ ದೇಶಮುಖ ಅವರನ್ನು ಕರೆಸಿ ಅಭೂತಪೂರ್ವ ಕಾರ್ಯಕ್ರಮ ನಡೆಸಿದ್ದರು. ರಾಜಕೀಯ ಲಾಭಕ್ಕಾಗಿ ಎಂಇಎಸ್ ಹುನ್ನಾರ
ಬೆಳಗಾವಿಯಲ್ಲಿ ಎಂಇಎಸ್ ನಾಯಕರು ಒಂದಿಲ್ಲೊಂದು ಕಿತಾಪತಿ ಮಾಡಿಕೊಂಡೇ ಬರುತ್ತಾರೆ. ಚುನಾವಣೆ ಸಮೀಪಿಸಿದಾಗಲಂತೂ ಕನ್ನಡ-ಮರಾಠಿ ಭಾಷಿಕರ ಸೌಹಾರ್ದತೆ ಹಾಳು ಮಾಡಿ ರಾಜಕೀಯ ಲಾಭ ಪಡೆಯುವುದು ಎಂಇಎಸ್‌ನ ಅಜೆಂಡಾ. ರಾಜಕೀಯವಾಗಿ ಸಂಪೂರ್ಣ ನೆಲಕಚ್ಚಿರುವ ಎಂಇಎಸ್ ವಿಧಾನಸಭೆಯಲ್ಲಿ ಗೆಲ್ಲಬೇಕೆಂಬ ದುರಾಸೆಯಿಂದ ವಿಷ ಬೀಜ ಬಿತ್ತುತ್ತಿದೆ. ಹೀಗಾಗಿ ಮೂರ್ತಿ ಶುದ್ಧೀಕರಣ ನೆಪದಲ್ಲಿ ರಾಜಕೀಯ ಸಂಘರ್ಷಕ್ಕೆ ಮುಂದಾಗಿದೆ. ಎಂಇಎಸ್ ನಾಯಕರು ಶಿವಾಜಿ ಮಹಾರಾಜರನ್ನು ಶುದ್ಧೀಕರಣ ಮಾಡುವ ಬದಲು ತಮ್ಮ ಮನಸ್ಸು ಶುದ್ಧ ಮಾಡಿಕೊಳ್ಳಲಿ. ರಾಜಹಂಸಗಡ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಶಿವಾಜಿ ವಂಶಸ್ಥರಾದ ಸಂಭಾಜಿರಾಜೇ ಭೋಸಲೆ ಶಾಸ್ತ್ರೋಕ್ತವಾಗಿ ಅನಾವರಣ ಮಾಡಿದ್ದಕ್ಕೆ ಶುದ್ಧೀಕರಣ
ಮಾಡುತ್ತಿದ್ದಾರಾ?. ಕ್ಷೇತ್ರದಲ್ಲಿ ನಾನು 103 ಮಂದಿರ ಜೀಣೋದ್ಧಾರ ಮಾಡಿದ್ದನ್ನೂ ಶುದ್ಧೀಕರಣ ಮಾಡುತ್ತಾರಾ?, ಶುದ್ಧೀಕರಣ ಮಾಡಲು ಇವರಿಗೆ ನೈತಿಕತೆ ಏನಿದೆ?
ಲಕ್ಷ್ಮೀ ಹೆಬ್ಬಾಳಕರ,
ಶಾಸಕರು, ಬೆಳಗಾವಿ ಗ್ರಾಮೀಣ *ಭೈರೋಬಾ ಕಾಂಬಳೆ