Advertisement
ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ರಘುಬರ್ ದಾಸ್, ಒಡಿಶಾ ಸಿಎಂ ಮೋಹನ್ ಮಾಝೀ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಥವನ್ನೆಳೆದು ಯಾತ್ರೋತ್ಸವಕ್ಕೆ ಚಾಲನೆ ನೀಡಿದ್ದಾರೆ.ರಥಗಳಿಗೆ ರಾಷ್ಟ್ರಪತಿ ಮುರ್ಮು ಅವ ರು ಪ್ರದಕ್ಷಿಣೆ ಹಾಕಿ, ಪೂಜೆ ಸಲ್ಲಿಸಿದರು.
Related Articles
Advertisement
ಈ ಆಚರಣೆಗಳಲ್ಲಿ ‘ನಬಜೌಬನ್ ದರ್ಶನ’ ಮತ್ತು ‘ನೇತ್ರ ಉತ್ಸವ’ ಸೇರಿವೆ, ಇವುಗಳನ್ನು ಸಾಮಾನ್ಯವಾಗಿ ರಥಯಾತ್ರೆಯ ಮುಂಚೆ ನಡೆಸಲಾಗುತ್ತದೆ.
ಉತ್ಸವವನ್ನು ಸುಗಮವಾಗಿ ಮತ್ತು ಸಮಯೋಚಿತವಾಗಿ ನಡೆಸಲು ಒಡಿಶಾ ಸರಕಾರ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ. “ಎಲ್ಲಾ ಧಾರ್ಮಿಕ ಕ್ರಿಯೆಗಳು ಸುಗಮವಾಗಿ ನಡೆಯುತ್ತಿವೆ, ಭಗವಾನ್ ಜಗನ್ನಾಥನ ಆಶೀರ್ವಾದದೊಂದಿಗೆ, ಎಲ್ಲಾ ಇತರ ಧಾರ್ಮಿಕ ಕ್ರಿಯೆಗಳನ್ನು ಸಹ ಕ್ರಮ ಪ್ರಕಾರ ಪ್ರಕಾರ ನಡೆಸಲಾಗುತ್ತಿದೆ ” ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಸುದ್ದಿ ಸಂಸ್ಥೆ PTI ಗೆ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಜನಸಂದಣಿಯನ್ನು ನಿರ್ವಹಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳ ಭದ್ರತಾ ಸಿಬಂದಿಗಳನ್ನೊಳಗೊಂಡ 180 ಪ್ಲಟೂನ್‌ಗಳನ್ನು (5400 ಮಂದಿ) ನಿಯೋಜಿಸಲಾಗಿದೆ ಎಂದು ಪುರಿ ಪೊಲೀಸ್ ವರಿಷ್ಠಾಧಿಕಾರಿ ಪಿನಾಕ್ ಮಿಶ್ರಾ ಹೇಳಿದ್ದಾರೆ. ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು ವಿಐಪಿ ವಲಯ ನಿರ್ಮಾಣ ಮಾಡಿ ಒಡಿಶಾ ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಸಚಿವರು ಮತ್ತು ಇತರ ಗಣ್ಯರಿಗೆ ಬಫರ್ ವಲಯವನ್ನು ಯೋಜಿಸಲಾಗಿದೆ. 10ರಿಂದ 15 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷಿಸಲಾಗಿದ್ದು, ಅಗ್ನಿಶಾಮಕ ದಳದಿಂದಲೂ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ವಿವಿಧೆಡೆ ಹಾಗೂ ಸಮುದ್ರ ತೀರದಲ್ಲಿ ಒಟ್ಟು 46 ಆಧುನಿಕ ಅಗ್ನಿಶಾಮಕ ಟೆಂಡರ್‌ಗಳನ್ನು ನಿಯೋಜಿಸಲಾಗಿದೆ. ಕಾಲ್ತುಳಿತ ಸ್ಥಿತಿಯಿಂದ ವ್ಯಕ್ತಿ ಗಂಭೀರ
ಯಾತ್ರೆ ಶುರುವಾದ ಕೆಲವೇ ಕ್ಷಣಗಳಲ್ಲಿ ಪುರಿಯಲ್ಲಿ ಕಾಲ್ತುಳಿತದ ಪರಿಸ್ಥಿತಿ ಎದುರಾಗಿದೆ. ರಥವನ್ನೆಳೆಯಲು ಭಕ್ತರು ಧಾವಿಸಿದ್ದರಿಂದ ನೂಕು ನುಗ್ಗಲು ಉಂಟಾಗಿ, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲ ಗಳು ತಿಳಿಸಿವೆ.