Advertisement

ಶುದ್ಧ ಕುಡಿಯುವ ನೀರಿನ ಘಟಕ: ಬೇಕಿದೆ ಜಾಗೃತಿ

06:00 AM Jul 19, 2018 | Team Udayavani |

ತೆಕ್ಕಟ್ಟೆ : ಕುಂಭಾಶಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ವಿನಾಯಕ ನಗರದ ಸುಮಾರು 600ಕ್ಕೂ ಅಧಿಕ ಜನ ವಸತಿ ಪ್ರದೇಶದಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆಯಾಗಿದೆ. ಆದರೆ ಸಾರ್ವಜನಿಕರಿಗೆ ಮಾಹಿತಿ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗಿಲ್ಲ.  

Advertisement

10 ಲೀ. ಶುದ್ಧ ನೀರು 
ಅತ್ಯಾಧುನಿಕ ತಂತ್ರಜ್ಞಾನದ ಘಟಕ ಇದಾಗಿದ್ದು, 1 ರೂ. ಹಾಕಿದರೆ 10 ಲೀ. ಶುದ್ಧ ನೀರು ಲಭ್ಯವಾಗುತ್ತದೆ. ಒಂದು ಬಾರಿಗೆ 2 ಸಾವಿರ ಲೀಟರ್‌ ನೀರನ್ನು ಇದರಲ್ಲಿ ಸಂಗ್ರಹಿಸಬಹುದಾಗಿದ್ದು, ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿಯಲ್ಲಿ ಸ್ಥಾಪಿಸಲಾಗಿದೆ.  

ಹ್ಯಾಂಡ್‌ ಪಂಪ್‌ ಬೇಡ
ವಿನಾಯಕ ನಗರದ 3ನೇ ಮುಖ್ಯ ರಸ್ತೆಯ ಬಳಿ ಇರುವ ಹ್ಯಾಂಡ್‌ ಪಂಪ್‌ನ ಕೇಸಿಂಗ್‌ ಪೈಪ್‌ ಸಮಸ್ಯೆಯಿಂದಾಗಿ ಕಂದು ಬಣ್ಣದ ಕಲುಷಿತ ನೀರು ಹೊರ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ದುರಸ್ತಿ ನಡೆವಲ್ಲಿವರೆಗೆ ಆ ನೀರನ್ನು ಬಳಸದೇ ಶುದ್ಧ ನೀರಿನ ಘಟಕದ ನೀರು ಬಳಸುವಂತೆ  ಕುಂಭಾಶಿ ಪಿಡಿಒ ಜಯರಾಮ ಶೆಟ್ಟಿ  ಹೇಳಿದ್ದಾರೆ.  

24 ಗಂಟೆಯೂ ನೀರು 
ಮಳೆಗಾಲದಲ್ಲಿ ಕಲುಷಿತ ನೀರಿನ ಸಮಸ್ಯೆ ಇದೆ. ಇದಕ್ಕಾಗಿ ಕುಡಿವ ನೀರಿನ ಸಮಸ್ಯೆ ಇರುವ ಭಾಗಗಳ ಜನರು ಶುದ್ಧ ನೀರಿನ ಘಟಕವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇದು ದಿನದ 24 ಗಂಟೆಗಳ ಕಾಲ ಸಾರ್ವಜನಿಕ ಸೇವೆಗಾಗಿ ಘಟಕ ತೆರೆದಿರುತ್ತದೆ ಎಂದು ಕುಂಭಾಶಿ ಗ್ರಾ.ಪಂ. ಅಧ್ಯಕ್ಷರಾದ  ಶ್ರೀವಾಣಿ ಅಡಿಗ ಹೇಳಿದ್ದಾರೆ.  

ವಿನಾಯಕ ನಗರದಲ್ಲಿ ಶುದ್ಧ ನೀರಿನ ಘಟಕ ತೆರೆದು 2 ತಿಂಗಳಾಗಿವೆ ಆದರೆ ಸಾರ್ವಜನಿಕರಿಗೆ ಈ ಬಗ್ಗೆ ಸಮರ್ಪಕವಾದ ಮಾಹಿತಿಯ ಕೊರತೆ ಇತ್ತು.  
– ವಿಜಯ ಕುಮಾರ್‌, ಸ್ಥಳೀಯರು

Advertisement

ಕಳೆದೆರಡು ತಿಂಗಳಿನಿಂದಲೂ ಮೂರನೇ ಮುಖ್ಯ ರಸ್ತೆಯಲ್ಲಿರುವ ಹ್ಯಾಂಡ್‌ ಪಂಪ್‌ನಲ್ಲಿ ಕಲುಷಿತ ನೀರು ಬರುತ್ತಿದೆ. ಪ್ರತಿ ಮನೆಗಳಿಗೆ ದಿನ ಬಳಕೆಗೆ ಗ್ರಾ.ಪಂ.ನಿಂದ ಪೂರೈಕೆಯಾಗುತ್ತಿರುವ ನೀರು ಸ್ನಾನ ಮಾಡಲು ಹಾಗೂ ಬಟ್ಟೆ  ಒಗೆಯಲು ಯೋಗ್ಯವಿಲ್ಲ.
– ಲಕ್ಷ್ಮೀ ಪೂಜಾರಿ,  3ನೇ ಮುಖ್ಯ ರಸ್ತೆಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next