Advertisement

MSPTC ಸಂಘಗಳಿಂದಲೇ ಪೌಷ್ಟಿಕ ಆಹಾರ ಖರೀದಿ: ದಿನೇಶ್‌ ಗುಂಡೂರಾವ್‌

11:36 PM Dec 14, 2023 | Team Udayavani |

ಬೆಳಗಾವಿ: ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರವನ್ನು 136 ಎಂಎಸ್‌ಪಿಟಿಸಿ ಸಂಘಗಳಿಂದ ಖರೀದಿಸಲಾಗುತ್ತಿದೆಯೇ ಹೊರತು ಯಾವುದೇ ಇತ ಸಂಘಸಂಸ್ಥೆಗಳಿಂದ ಖರೀದಿಸುತ್ತಿಲ್ಲ ಎಂದು ಸಚಿವ ದಿನೇಶ ಗುಂಡೂರಾವ್‌ ಸ್ಪಷ್ಟಪಡಿಸಿದರು.

Advertisement

ವಿಧಾನಸಭೆ ಕಲಾಪದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಕಾರ್ಯವನ್ನು 136 ಎಂಎಸ್‌ಪಿಟಿಸಿ ಸಂಘಗಳಿಗೆ ಮುಂದುವರಿಸಲಾಗಿದೆ. ಇದನ್ನು ಇತರ ಯಾವುದೇ ಸಂಸ್ಥೆಗಳಿಗೆ ನೀಡಿಲ್ಲ. ನೀವು ಹೆಸರಿಸಿದ ಮೂರು ಸಂಸ್ಥೆಗಳು ಸಲಹೆ ಮಾತ್ರ ನೀಡುತ್ತಿವೆ. ಕೇವಲ ಊಹಾಪೋಹ, ಗಾಳಿ ಸುದ್ದಿಗೆ ಮಹತ್ವ ನೀಡುವ ಅಗತ್ಯವಿಲ್ಲ. ಹಿಂದಿನ ಕ್ರಿಸ್ಟಿ ಫ್ಲೆ$çಡ್‌ಗ್ರಾಂ ಸಂಸ್ಥೆ ಯಿಂದ ಯಾವುದೇ ಖರೀದಿ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next