Advertisement

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

07:37 AM Oct 25, 2020 | sudhir |

ದುಬಾೖ: ಪ್ಲೇ ಆಫ್ ಪೈಪೋಟಿಯ ಶನಿವಾರದ ದ್ವಿತೀಯ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಜೋಶ್‌ ತೋರುವಲ್ಲಿ ಸಂಪೂರ್ಣ ವಿಫ‌ಲವಾದ ಹೈದರಾಬಾದ್‌ 12ರನ್‌ ಅಂತರದ ಸೋಲು ಕಂಡಿದೆ.

Advertisement

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪಂಜಾಬ್‌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟಿಗೆ 126ರನ್‌ ಗಳಿಸಿ ಸವಾಲೊಡ್ಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಹೈದರಾಬಾದ್‌ 19.5 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 114 ರನ್‌ ಗಳಿಸಲಷ್ಟೆ ಶಕ್ತವಾಗಿ ಶರಣಾಯಿತು.

ಪಂಜಾಬ್‌ ಪರ ಕ್ರಿಸ್‌ ಜೋರ್ಡನ್‌ ಮತ್ತು ಆರ್ಷದೀಪ್‌ಸಿಂಗ್‌ ತಲಾ 3 ವಿಕೆಟ್‌ ಕಿತ್ತು ಮಿಂಚಿದರು. ಅಗರ್ವಾಲ್‌ ಗೈರಲ್ಲಿ ರಾಹುಲ್‌ ಜತೆ ಮನ್‌ದೀಪ್‌ ಸಿಂಗ್‌ ಇನ್ನಿಂಗ್ಸ್‌ ಆರಂಭಿಸಿದರು. ಆದರೆ ಈ ಅವಕಾಶ ಬಳಸಿಕೊಳ್ಳಲು ವಿಫ‌ಲರಾದರು. ಕೇವಲ 17 ರನ್‌ ಮಾಡಿ ಸಂದೀಪ್‌ ಶರ್ಮ ಅವರಿಗೆ 100ನೇ ಐಪಿಎಲ್‌ ವಿಕೆಟ್‌ ಒಪ್ಪಿಸಿದರು. ಆಗ ಪಂಜಾಬ್‌ 5 ಓವರ್‌ಗಳಲ್ಲಿ 37 ರನ್‌ ಮಾಡಿತ್ತು. ರಾಹುಲ್‌-ಗೇಲ್‌ ಸತತ ಎಸೆತಗಳಲ್ಲಿ ಔಟಾದುದರಿಂದ ತಂಡದ ಮೇಲಿನ ಒತ್ತಡ ಹೆಚ್ಚಿತು.

Advertisement

Udayavani is now on Telegram. Click here to join our channel and stay updated with the latest news.

Next