ಅಬುಧಾಬಿ: ನಾಯಕ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಅವರ ಭರ್ಜರಿ ಅರ್ಧಶತಕದ ನೆರವಿನ ಹೊರತಾಗಿಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 2 ರನ್ ಗಳಿಂದ ಮುಗ್ಗರಿಸಿದೆ.
ಕೊಲ್ಕತ್ತಾ ನೀಡಿದ 165 ರನ್ ಗಳ ಗುರಿ ಬೆನ್ನತ್ತಿದ ಪಂಜಾಬ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಅಲ್ಪದರಲ್ಲೇ ಸೋಲನನುಭವಿಸಿತು.
ಆರಂಭಿಕರಾಗಿ ಕಣಕ್ಕಿಳಿದ ನಾಯಕ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ ಈ ಜೋಡಿ 115ರನ್ ಗಳ ಜೊತೆಯಾಟ ನಡೆಸಿತು. ಮಾಯಾಂಕ್ 39 ಎಸೆತಗಳಲ್ಲಿ 1 ಸಿಕ್ಸ್ 6 ಬೌಂಡರಿ ಸಹಿತ 56 ರನ್ ಸಿಡಿಸಿ ಅರ್ಧಶತಕದ ಸಂಭ್ರಮ ಆಚರಿಸಿದರು. ಆದರೇ ಪ್ರಸಿದ್ಧ್ ಕೃಷ್ಣಾ ಬೌಲಿಂಗ್ ನಲ್ಲಿ ಗಿಲ್ ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಒನ್ ಡೌನ್ ನಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ 16 ರನ್ ಗಳಿಸಿದ್ದಾಗ ನರೈನ್ ಗೆ ವಿಕೆಟ್ ಒಪ್ಪಿಸಿದರು. ಸಿಮ್ರಾನ್ ಸಿಂಗ್ ಆಟ ಕೇವಲ 4 ರನ್ ಗಳಿಗೆ ಸೀಮಿತವಾಯಿತು. ಏತನ್ಮಧ್ಯೆ 6 ಬೌಂಡರಿ ಬಾರಿಸಿ ಪಂದ್ಯವನ್ನು ಗೆಲುವಿನ ಸನಿಹಕ್ಕೆ ತಂದಿದ್ದ ಕೆ.ಎಲ್ ರಾಹುಲ್ ಪ್ರಸಿದ್ದ್ ಕೃಷ್ಣಾ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ರಾಹುಲ್ 58 ಎಸೆತಗಳಲ್ಲಿ 74 ರನ್ ಗಳಿಸಿದ್ದರು.
ನಂತರ ಬಂದ ಮನ್ ದೀಪ್ ಸಿಂಗ್ ಶೂನ್ಯ ಸುತ್ತಿ ಬಂದ ಹಾಂದಿಯಲ್ಲೆ ಹಿಂದಿರುಗಿದರು. ಕೊನೆಯಲ್ಲಿ ಮ್ಯಾಕ್ಸ್ ವೆಲ್(10) 2 ಬೌಂಡರಿಸಿ ಸಿಡಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಕ್ರಿಸ್ ಜೋರ್ಡನ್ ಮತ್ತು ಮ್ಯಾಕ್ಸ್ ವೆಲ್ ನಾಟೌಟ್ ಆಗಿ ಉಳಿದರು,
ಕೋಲ್ಕತ್ತಾ ಪರ ಉತ್ತಮ ದಾಳಿ ಸಂಘಟಿಸಿದ ಪ್ರಸಿದ್ಧ್ ಕೃಷ್ಣಾ 3 ವಿಕೆಟ್ ಪಡೆದರು, ಸುನಿಲ್ ನರೈನ್ 2 ವಿಕೆಟ್ ಉರುಳಿಸಿದರು.