Advertisement

ಕೋವಿಡ್-19 ಭೀತಿ: ಪಂಜಾಬ್ ಸಂಪೂರ್ಣ ಲಾಕ್ ಡೌನ್: ತುರ್ತು ಸೇವೆಗಳು ಮಾತ್ರ ಲಭ್ಯ

11:51 AM Mar 27, 2020 | Mithun PG |

ಪಂಜಾಬ್: ದೇಶದಲ್ಲಿ ಕೋವಿಡ್-19 ಭೀತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ  ಪಂಜಾಬ್ ರಾಜ್ಯವನ್ನು ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಆದೇಶ ನೀಡಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

Advertisement

ಆದರೇ ಅಗಗತ್ಯವಾದ ಮತ್ತು ತುರ್ತು ಸೇವೆಗಳನ್ನು ಮಾತ್ರ ಲಭ್ಯವಾಗಲಿದೆ. ಹೊರರಾಜ್ಯದ ಜೊತೆ ಯಾವುದೇ ಸಂಪರ್ಕವಿರುವುದಿಲ್ಲ, ಸಾರಿಗೆ ಸಂಪರ್ಕಗಳನ್ನು ಕೂಡ ನಿಷೇಧಿಸಲಾಗಿದೆ ಎಂದು ತಮ್ಮ ಸಿಎಂ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.

ಪಂಜಾಬ್, ಹರ್ಯಾಣ, ಮುಂತಾದ ಕಡೆ ಜನತಾ ಕರ್ಫ್ಯೂ ಕಾರಣದಿಂದ ರಸ್ತೆಗಳೆಲ್ಲ ಸಂಪೂರ್ಣ ಸ್ತಬ್ಧವಾಗಿದೆ. ಮೆಡಿಕಲ್ ಶಾಫ್ ಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸೇವೆಗಳು ಅಲಭ್ಯವಾಗಿದೆ. ಶನಿವಾರ ಸಂಜೆ ಮಾರ್ಚ್ 25 ರವರೆಗೂ ಕಪುರ್ತಾಲ, ಜಲಂಧರ್ ಸೇರಿದಂತೆ ಕೆಲವು ಜಿಲ್ಲೆಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಪಂಜಾಬ್ ಸರ್ಕಾರ ಆದೇಶಿಸಿತ್ತು.

ಶನಿವಾರ ಪಂಜಾಬ್ ನಲ್ಲಿ ಒಮ್ಮೆಲೆ 11 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next