Advertisement

ಲುಧಿಯಾನದಲ್ಲಿ ಗುಡಿಸಲಿಗೆ ಬೆಂಕಿ; ಮಕ್ಕಳು ಸೇರಿ ಒಂದೇ ಕುಟುಂಬದ ಏಳು ಮಂದಿ ಜೀವಂತ ದಹನ

11:58 AM Apr 20, 2022 | Team Udayavani |

ಚಂಡೀಗಢ್: ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ಏಳು ಮಂದಿ ಸಜೀವವಾಗಿ ದಹನವಾಗಿರುವ ಘಟನೆ ಪಂಜಾಬ್ ನ ಲುಧಿಯಾನದಲ್ಲಿ ಬುಧವಾರ (ಏಪ್ರಿಲ್ 20) ಬೆಳಗ್ಗೆ ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಜಹಾಂಗೀರ್‌ಪುರಿ: ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆಗೆ ಸುಪ್ರೀಂ ತಡೆ

ಲುಧಿಯಾನದ ಟಿಬ್ಬಾ ರಸ್ತೆಯ ನಗರಪಾಲಿಕೆಯ ಡಂಪಿಂಗ್ ಯಾರ್ಡ್ ಸಮೀಪದ ಗುಡಿಸಲಿನಲ್ಲಿ ಮಲಗಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿತ್ತು. ಇವರೆಲ್ಲ ವಲಸೆ ಕಾರ್ಮಿಕರಾಗಿದ್ದಾರೆ ಎಂದು ಪೊಲೀಸ್ ಸಹಾಯಕ ಕಮಿಷನರ್ ಸುರೇಂದರ್ ಸಿಂಗ್ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

ಘಟನೆಯಲ್ಲಿ ದಂಪತಿ ಹಾಗೂ ಅವರ ಐವರು ಮಕ್ಕಳು ಸಜೀವವಾಗಿ ಸುಟ್ಟುಹೋಗಿದ್ದು, ಅವರ ಹೆಸರು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗುಡಿಸಲಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next