ಚಂಡೀಗಢ: 3.79 ಕೆಜಿ ಆರ್ ಡಿಎಕ್ಸ್, ಒಂಬತ್ತು ಡಿಟೋನೇಟರ್ಸ್, ಎರಡು ಸೆಟ್ಸ್ ಟೈಮರ್ ಉಪಕರಣವನ್ನು ಪಂಜಾಬ್ ನ ಗುರುದಾಸ್ ಪುರ್ ಪೊಲೀಸರು ವಶಪಡಿಸಿಕೊಳ್ಳುವ ಮೂಲಕ ಗಣರಾಜ್ಯೋತ್ಸವದಂದು ನಡೆಸಲು ಉದ್ದೇಶಿಸಿದ್ದ ಸಂಭಾವ್ಯ ಉಗ್ರರ ದಾಳಿಯನ್ನು ವಿಫಲಗೊಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ: ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ
ಭಯೋತ್ಪಾದಕ ದಾಳಿ ನಡೆಸುವ ಸಂಚಿನ ಆರೋಪದ ಮೇಲೆ ಗುರುವಾರ ಗುರುದಾಸ್ ಪುರ್ ಪೊಲೀಸರು ಗಾಜಿಕೋಟ್ ಗ್ರಾಮದ ನಿವಾಸಿ ಮಲ್ಕೀತ್ ಸಿಂಗ್ ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟ ವಿಷಯದ ಆಧಾರದ ಮೇಲೆ ಸ್ಫೋಟಕ ಹಾಗೂ ಉಪಕರಣಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ಮೋಹಿನೀಶ್ ಚಾವ್ಲಾ ತಿಳಿಸಿದ್ದಾರೆ.
ಗಣರಾಜ್ಯೋತ್ಸದಂದು ನಡೆಸಲು ಉದ್ದೇಶಿಸಿದ್ದ ಸಂಭಾವ್ಯ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದೇವೆ ಎಂದು ತಿಳಿಸಿರುವ ಪಂಜಾಬ್ ಪೊಲೀಸರು, 40ಎಂಎಂನ ರಾಕೆಟ್ ಲಾಂಚರ್, ಆರ್ ಡಿಎಕ್ಸ್, ಟೈಮರ್, ಐಇಡಿಯನ್ನು ಗುರುದಾಸ್ ಪುರದಲ್ಲಿ ವಶಕ್ಕೆ ತೆಗೆದುಕೊಂಡಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಚಾವ್ಲಾ ಅವರು ತಿಳಿಸಿದ್ದಾರೆ.
ಪಾಕಿಸ್ತಾನ ಮೂಲದ ಇಂಟರ್ ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ (ಐಎಸ್ ವೈಎಫ್) ನ ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡೆ ಈ ಸ್ಫೋಟಕ ಹಾಗೂ ಉಪಕರಣಗಳನ್ನು ಗಡಿಭಾಗಕ್ಕೆ ಕಳುಹಿಸಿರುವುದಾಗಿ ವರದಿ ವಿವರಿಸಿದೆ.