Advertisement

4 ಕೋಟಿ ರೂ.ವಿಮೆಗಾಗಿ ಸ್ನೇಹಿತನನ್ನು ಮುಗಿಸಿ ತಾನೇ ಮೃತಪಟ್ಟಿದ್ದೇನೆ ಎಂದು ಬಿಂಬಿಸಿದ !!

04:20 PM Jun 29, 2023 | Team Udayavani |

ಅಮೃತಸರ : ನಷ್ಟವನ್ನು ಎದುರಿಸುತ್ತಿದ್ದ ಉದ್ಯಮಿಯೊಬ್ಬ ವಿಮೆ ಹಣವನ್ನು ಪಡೆಯುವ ಸಲುವಾಗಿ ಸ್ನೇಹಿತನನ್ನು ಹತ್ಯೆಗೈದು ಅದು ತನ್ನದೇ ಸಾವು ಎಂದು ಬಿಂಬಿಸಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

Advertisement

ಸುಖಜೀತ್ ಸಿಂಗ್ ಎನ್ನುವವರ ಹತ್ಯೆ ಮತ್ತು ಭಾರಿ ವಂಚನೆಗೆ ಯತ್ನಿಸಿದ ಪ್ರಕರಣದಲ್ಲಿ ರಾಮದಾಸ್ ನಗರ ಪ್ರದೇಶದ ಗುರ್‌ಪ್ರೀತ್ ಸಿಂಗ್, ಆತನ ಪತ್ನಿ ಖುಷ್‌ದೀಪ್ ಕೌರ್ ಮತ್ತು ಇತರ ನಾಲ್ವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾವ್‌ಜೋತ್ ಕೌರ್ ಗ್ರೆವಾಲ್ ತಿಳಿಸಿದ್ದಾರೆ.

ಹತ್ಯೆಗೀಡಾದ ಸುಖಜೀತ್ ಅವರ ಪತ್ನಿ ಜೀವನ್‌ದೀಪ್ ಕೌರ್ ಅವರು, ಪತಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ ನಂತರ ವಿಷಯ ಬೆಳಕಿಗೆ ಬಂದಿದೆ.

ಗುರ್‌ಪ್ರೀತ್ ತನ್ನ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಿದ್ದ ಮತ್ತು 4 ಕೋಟಿ ಮೌಲ್ಯದ ವಿಮಾ ಹಣವನ್ನು ಪಡೆಯಲು ತನ್ನ ಹೆಂಡತಿ ಮತ್ತು ಇತರ ನಾಲ್ವರಾದ ಸುಖ್‌ವಿಂದರ್ ಸಿಂಗ್ ಸಂಘ, ಜಸ್ಪಾಲ್ ಸಿಂಗ್, ದಿನೇಶ್ ಕುಮಾರ್ ಮತ್ತು ರಾಜೇಶ್ ಕುಮಾರ್ ಜತೆ ಸೇರಿ ತನ್ನದೇ ಸಾವನ್ನು ನಕಲಿ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಯಿನ್‌ಪುರ ಪ್ರದೇಶದ ನಿವಾಸಿ ಸುಖಜೀತ್‌ನನ್ನು ಕೊಲ್ಲುವ ಉದ್ದೇಶದಿಂದ ಗುರುಪ್ರೀತ್ ಸ್ನೇಹ ಬೆಳೆಸಿದ್ದ. ಜೂನ್ 19 ರಂದು ನಾಪತ್ತೆಯಾಗಿದ ಹಿನ್ನೆಲೆಯಲ್ಲಿ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಪಟಿಯಾಲ ರಸ್ತೆಯ ಕಾಲುವೆಯೊಂದರ ಬಳಿ ಸುಖಜೀತ್‌ನ ಮೋಟಾರ್‌ಸೈಕಲ್ ಮತ್ತು ಚಪ್ಪಲಿಗಳು ಪತ್ತೆಯಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದರು.

Advertisement

ಕಳೆದ ಕೆಲವು ದಿನಗಳಿಂದ ಗುರ್‌ಪ್ರೀತ್ ತನ್ನ ಪತಿಗೆ ಮದ್ಯ ಖರೀದಿಸುತ್ತಿದ್ದ ಎಂದು ಸುಖಜೀತ್ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ, ಗುರುಪ್ರೀತ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಗುರುಪ್ರೀತ್ ಕುಟುಂಬವನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗಿದೆ. ಆಗ ಗುರ್‌ಪ್ರೀತ್ ಜೀವಂತವಾಗಿದ್ದಾನೆ ಮತ್ತು 4 ಕೋಟಿ ರೂ. ಮೌಲ್ಯದ ವಿಮೆ ಹಣವನ್ನು ಪಡೆಯಲು ತನ್ನ ಹೆಂಡತಿ ಮತ್ತು ಇತರರೊಂದಿಗೆ ತನ್ನ ಸಾವನ್ನು ನಕಲಿ ಮಾಡಲು ಸಂಚು ರೂಪಿಸಿದ್ದನು ಎಂಬ ವಿಚಾರ ಬಯಲಾಗಿದೆ.

ತನಿಖೆಯ ಸಮಯದಲ್ಲಿ, ಗುರುಪ್ರೀತ್ ಕುಟುಂಬವು ಜೂನ್ 20 ರಂದು ರಾಜಪುರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತದಲ್ಲಿ(ಗುರುಪ್ರೀತ್) ಸಾವನ್ನಪ್ಪಿದ್ದಾರೆ ಎಂದು ದೂರು ನೀಡಿತ್ತು.

ಜೂನ್ 19 ರಂದು, ಗುರ್‌ಪ್ರೀತ್ ಸಂಚು ಹೂಡಿ ಸುಖಜೀತ್‌ ಗೆ ಪಾನೀಯವನ್ನು ನೀಡಿ ಪ್ರಜ್ಞೆ ತಪ್ಪಿದ ನಂತರ ಗುರುಪ್ರೀತ್ ತನ್ನ ಬಟ್ಟೆ ಬದಲಿಸಿ ಟ್ರಕ್ ಅಡಿಯಲ್ಲಿ ಹಾಕಿದ್ದು ಆತನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಇದೇ ವೇಳೆ ಗುರ್‌ಪ್ರೀತ್‌ನ ಪತ್ನಿ ಸುಖಜೀತ್‌ನ ವಿರೂಪಗೊಂಡ ದೇಹವನ್ನು ತನ್ನ ಪತಿ ಎಂದು ಗುರುತಿಸಿ ನಟಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next