Advertisement

ಹೆದ್ದಾರಿಗಾಗಿ ತನ್ನ ಮನೆಯನ್ನೇ 500 ಅಡಿ ದೂರ ಶಿಫ್ಟ್ ಮಾಡಿದ ರೈತ!

08:27 AM Aug 21, 2022 | Team Udayavani |

ಚಂಡೀಗಢ: ಮರಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವುದನ್ನು ಕೇಳಿರುತ್ತೀರಿ, ನೋಡಿರುತ್ತೀರಿ. ಆದರೆ ಪಂಜಾಬ್‌ನಲ್ಲಿ ಹೆದ್ದಾರಿಗೆ ಜಾಗ ಮಾಡಿಕೊಡುವ ಸಲುವಾಗಿ ರೈತರೊಬ್ಬರು ತಮ್ಮ ಕನಸಿನ ಮನೆಯನ್ನೇ 500 ಅಡಿಗಳಷ್ಟು ಹಿಂದಕ್ಕೆ ಸರಿಸಲಾರಂಭಿಸಿದ್ದಾರೆ!

Advertisement

ಸಂಗ್ರೂರಿನ ರೋಶನ್‌ವಾಲಾ ಗ್ರಾಮದ ಸುಖ್ವಿಂದರ್ ಸಿಂಗ್ ಸುಖಿ ಬರೋಬ್ಬರಿ 1.5 ಕೋಟಿ ರೂ. ಖರ್ಚು ಮಾಡಿ ಎರಡು ವರ್ಷಗಳಲ್ಲಿ ಒಂದು ಸುಂದರ ಮನೆ ಕಟ್ಟಿದ್ದಾರೆ. ತಮ್ಮದೇ ಹೊಲದಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಕೊಂಡಿರುವ ಅವರ ಮನೆಯನ್ನು ಇದೀಗ ಕೆಡವುವ ಪರಿಸ್ಥಿತಿ ಎದುರಾಗಿದೆ. ಅವರ ಮನೆ ಎದುರಲ್ಲೇ ದೆಹಲಿ-ಅಮೃತಸರ-ಕರ್ತಾ ಎಕ್ಸ್‌ಪ್ರೆಸ್‌ವೇ ಆಗುತ್ತಿದ್ದು, ಅದಕ್ಕಾಗಿ ಸುಖ್ವಿಂದರ್ ಜಾಗ ಬಿಟ್ಟುಕೊಡಬೇಕಿದೆ. ಅದಕ್ಕೆ ಪರಿಹಾರವಾಗಿ ಸರ್ಕಾರ ಹಣವನ್ನೂ ಕೊಟ್ಟಿದೆ.

ಆದರೆ ದೊಡ್ಡ ಕನಸಿನೊಂದಿಗೆ ಕಟ್ಟಿರುವ ಮನೆಯನ್ನು ಕೆಡವಲಿಚ್ಛಿಸದ ಸುಖ್ವಿಂದರ್ ಆ ಮನೆಯನ್ನೇ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಪರಿಣತರ ಸಹಾಯ ಪಡೆದು, ಮನೆಯನ್ನು ಅಡಿಪಾಯದೊಂದಿಗೆ ಮೇಲಕ್ಕೆತ್ತಿ ಅದಕ್ಕೆ ಚಕ್ರ ರೂಪದ ಉಪಕರಣ ಜೋಡಿಸಿ ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಮನೆಯಿದ್ದ ಸ್ಥಳದಿಂದ ಈಗಾಗಲೇ 250 ಅಡಿ ಹಿಂದಕ್ಕೆ ಸ್ಥಳಾಂತರಿಸಲಾಗಿದ್ದು, ಒಟ್ಟು 500 ಅಡಿ ಹಿಂದಕ್ಕೆ ಸರಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದಿದ್ದಾರೆ ಸುಖ್ವಿಂದರ್.

Advertisement

Udayavani is now on Telegram. Click here to join our channel and stay updated with the latest news.

Next