ಚಂಡೀಗಡ : ಪೊಲೀಸರು ಕಳ್ಳರನ್ನು ಹಿಡಿಯಬೇಕೆ ಹೊರತು ತಾವೇ ಖದೀಮರಾಗಬಾರದು. ಆರಕ್ಷರು ಇದ್ದಾರೆ ಎನ್ನುವ ನಂಬಿಕೆಯಲ್ಲಿ ಜನ ಸಾಮಾನ್ಯರು ನೆಮ್ಮದಿಯಿಂದ ಸುರಕ್ಷಿತವಾಗಿರುತ್ತಾರೆ. ಆದರೆ, ಪೊಲೀಸರ ಕುರಿತು ಇರುವ ಈ ನಂಬಿಕೆಯನ್ನೇ ಸುಳ್ಳಾಗಿಸುವ ಪ್ರಸಂಗವೊಂದು ಪಂಜಾಬ್ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರಿಂದ ನಡೆದಿದೆ.
ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸೈಕಲಿನಲ್ಲಿದ್ದ ಕೋಳಿಯ ಮೊಟ್ಟೆಗಳನ್ನು ಹೆಡ್ ಪಿಸಿ ಕಳ್ಳತನ ಮಾಡಿದ್ದಾರೆ. ಜನರ ರಕ್ಷಣೆ ಮಾಡಬೇಕಾದ ಪೊಲೀಸನೇ ಹೀಗೇ ಕಳ್ಳತನ ಮಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೀಗೆ ಮೊಟ್ಟೆ ಕಳ್ಳತನ ಮಾಡಿರುವ ಪೊಲೀಸಪ್ಪನ ಹೆಸರು ಪ್ರೀತ್ಪಾಲ್ ಸಿಂಗ್. ಈತ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಸೈಕಲ್ ವೊಂದರಲ್ಲಿಡಲಾಗಿದ್ದ ಮೊಟ್ಟೆಗಳನ್ನು ಎಗರಿಸಿ, ತನ್ನ ಪ್ಯಾಂಟ್ ಜೇಬಿನಲ್ಲಿ ಇಳಿಸಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಮವಸ್ತ್ರದಲ್ಲಿದ್ದುಕೊಂಡೆ ಕಳ್ಳತನ ಮಾಡಿದ ಪೊಲೀಸನ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ಅಮಾನತು :
ಪ್ರೀತ್ಪಾಲ್ ಸಿಂಗ್ ಮೊಟ್ಟೆ ಕಳ್ಳತನದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಇದು ಪಂಜಾಬ್ ಪೊಲೀಸ್ ಇಲಾಖೆಯ ಗಮನಕ್ಕೂ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಿಸಿ ಪ್ರೀತ್ಪಾಲ್ ಸಿಂಗ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.