Advertisement

ಪಂಜಾಬ್‌ ಶೇ.70, ಗೋವಾ ಶೇ.83 ಮತದಾನ

03:45 AM Feb 05, 2017 | |

ಚಂಡೀಗಢ/ ಪಣಜಿ:  ಪಂಚರಾಜ್ಯ ಚುನಾವಣೆಯ ಮೊದಲ ಹಂತವಾಗಿ ಪಂಜಾಬ್‌ ಮತ್ತು ಗೋವಾದಲ್ಲಿ ಯಶಸ್ವಿ ಮತದಾನವಾಗಿದೆ. ಪಂಜಾಬ್‌ನ 115, ಗೋವಾ 40 ವಿಧಾನಸಭಾ ಕ್ಷೇತ್ರದಲ್ಲಿ ಕ್ರಮವಾಗಿ ಶೇ.83 ಹಾಗೂ ಶೇ.70ರಷ್ಟು ಮತದಾನ ನಡೆದಿದೆ. 

Advertisement

ಆಪ್‌- ಕಾಂಗ್ರೆಸ್‌ ಮಾರಾಮಾರಿ: ಪಂಜಾಬ್‌ನ ಸಂಗ್ರೂರ್‌ ಜಿಲ್ಲೆಯ ಸುಲ್ತಾನ್‌ಪುರದಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಗಲಭೆ ನಡೆದಿದ್ದು, ಇಬ್ಬರು ವ್ಯಕ್ತಿಗಳಿಗೆ ಗಾಯವಾಗಿದ್ದು, ಒಂದು ಕಾರು ಜಖಂ ಆಗಿದೆ. ಇನ್ನೊಂದೆಡೆ ಟಾರ್ನ್ ಟರನ್‌ ಜಿಲ್ಲೆಯ ಲಾಲು ಗುಲಾಮ್‌ ಹಳ್ಳಿಯಲ್ಲಿ ಅಕಾಲಿ ದಳ ಕಾರ್ಯಕರ್ತ ಬೂತ್‌ನ ಹೊರಗಡೆ ಗುಂಡು ಹಾರಿಸಿದ್ದರಿಂದ ಕಾಂಗ್ರೆಸ್‌ ಕಾರ್ಯಕರ್ತನಿಗೆ ಸಣ್ಣಪುಟ್ಟ ಗಾಯವಾಗಿದೆ. 

ಕೈಕೊಟ್ಟ ವಿವಿಪ್ಯಾಟ್‌:  ಪಂಜಾಬ್‌ ಚುನಾವಣೆಧಿಯಲ್ಲಿ ಇದೇ ಮೊದಲ ಬಾರಿಗೆ ಪ್ರಮಾಣಿಸಿದ ಕಾಗದದ ಆಡಿಟ್‌ ಟ್ರಯಲ್‌ (ವಿವಿಪ್ಯಾಟ್‌) ಮತಯಂತ್ರಗಳನ್ನು ನಿಯೋಜಿಸಲಾಗಿತ್ತು. ಅವು ಕೈಕೊಟ್ಟ ಹಿನ್ನೆಲೆಯಲ್ಲಿ ಮಜಿತಾ ಮತ್ತು ಸಂಗ್ರೂರ್‌ನಲ್ಲಿ ಮತದಾರರು ಕೆಲ ಕಾಲ ತೊಂದರೆ ಅನುಭವಿಸಿದರು. 

ಗೋವಾದಲ್ಲಿ ಶಾಂತಿಯುತ: ಗೋವಾದಲ್ಲಿ ಮತದಾನ ಸಂಪೂರ್ಣ ಶಾಂತಿಯುತವಾಗಿದ್ದು, 11.10 ಲಕ್ಷ ಮಂದಿ 250 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ. ಪಣಜಿಯಲ್ಲಿ ಬೂತ್‌ ಹೊರಗಡೆ ಕ್ಯೂನಲ್ಲಿ ನಿಂತಿದ್ದ 78 ವರ್ಷದ ವೃದ್ಧ ಕುಸಿದುಬಿದ್ದು, ಹೃದಯಾಘಾತದಿಂದ ಅಸುನೀಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next